
ಪ್ರಗತಿವಾಹಿನಿ ಸುದ್ದಿ; ಸೆಕ್ಸ್ ಸಿಡಿ ಹಗರಣಕ್ಕೆ ಸಂಬಂಧಿಸಿದಂತೆ ಛತ್ತಿಸ್ ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರಾಯ್ಪುರ ಸಿಬಿಐ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ.
2017ರ ಸೆಕ್ಸ್ ಸಿಡಿ ಪ್ರಕರಣದಲ್ಲಿ ಭೂಪೇಶ್ ಭಗೇಲ್ ಅವರನ್ನು ಖುಲಾಸೆಗೊಳಿಸಿ 2024ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಇದೀಗ ಸಿಬಿಐ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ. ಅಂದಿನ ಲೋಕೋಪಯೋಗಿ ಸಚಿವ ರಾಜೇಶ್ ಮುನಾತ್ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣದ ವಿರುದ್ಧ ರಾಜೇಶ್ ಮುನಾತ್ ಕಾನೂನು ಸಮರ ಸಾರಿದ್ದರು.
2016ರ ಅಕ್ಟೋಬರ್ ನಲ್ಲಿ ಪತ್ರಕರ್ತ ಹಾಗೂ ಭೂಪೇಶ್ ಬಘೇಲ್ ಸಲಹೇಗಾರ ವಿನೋದ್ ಶರ್ಮಾನನ್ನು 500 ಸಿಡಿಗಳ ಸಮೇತ ಬಂಧಿಸಲಾಗಿತ್ತು. ಭೂಪೇಶ್ ಬಘೇಲ್ ಕೂಡ ಅಬಂಧನಕ್ಕೀಡಾಗಿದ್ದರು. 2024ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಬಘೇಲ್ ಅವರನ್ನು ಪ್ರಕರಣದಿಂದ ಖುಲಾಲೆಗೊಳಿಸಿತ್ತು. ಇದೀಗ ಈ ಕೇಸ್ ನಲ್ಲಿ ಬಘೇಲ್ ಖುಲಾಸೆ ಆದೇಶವನ್ನು ಸಿಬಿಐ ಕೋರ್ಟ್ ರದ್ದು ಮಾಡಿದೆ.




