Latest

ಡಿಸಿಎಂ ಸವದಿ ಪುತ್ರನಿಗೆ ಕ್ಲೀನ್ ಚಿಟ್ ನೀಡಿದ ಎಸ್ ಪಿ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರು ಅಪಘಾತದಲ್ಲಿ ರೈತನ ಸಾವು ಪ್ರಕರಣ ಸಂಬಂಧ ಡಿಸಿಎಂ ಸವದಿ ಪುತ್ರನಿಗೆ ಬಾಗಲಕೋಟೆ ಜಿಲ್ಲಾ ಎಸ್ ಪಿ ಲೋಕೇಶ್ ಕ್ಲೀನ್ ಚಿಟ್ ನೀಡಿದ್ದಾರೆ.

ಅಪಘಾತದ ವೇಳೆ ಕಾರನ್ನು ಡಿಸಿಎಂ ಪುತ್ರ ಚಿದಾನಂದ ಸವದಿ ಚಲಾಯಿಸುತ್ತಿರಲಿಲ್ಲ. ಕಾರನ್ನು ಚಿದಾನಂದ್ ಅವರ ಡ್ರೈವರ್ ಹನುಮಂತ ಎಂಬುವವರು ಕಾರನ್ನು ಓಡಿಸುತ್ತಿದ್ದರು. ದೇವಲಾಪುರ ಕ್ರಾಸ್ ಬಳಿ ನಿನ್ನೆ ಸಂಜೆ 6-7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಪ್ರಕರಣ ಸಂಬಂಧ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಐಪಿಸಿ ಸೆಕ್ಷನ್ 304ರ ಅಡಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ಇನ್ನು ಪುತ್ರನ ಕಾರು ಅಪಘಾತ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಲಕ್ಷ್ಮಣ ಸವದಿ, ನನ್ನ ಮಗ ಡ್ರೈವಿಂಗ್ ಮಾಡಲ್ಲ. ಚಾಲಕನೇ ಕಾರು ಓಡಿಸುವುದು. ಅಪಘಾತದ ವೇಳೆ ನನ್ನ ಮಗ ಹಾಗೂ ಸ್ನೇಹಿತರು ಬೇರೆ ಕಾರಿನಲ್ಲಿದ್ದರು. ಸಚಿವರ ಮಗನ ವಿಚಾರ ಬಂದಾಗ ಕೆಲವೊಂದು ಚರ್ಚೆ ನಡೆಯುವುದು ಸಹಜ. ತನಿಖೆ ನಡೆಯುತ್ತಿದೆ ನೋಡೋಣ ಎಂದು ಹೇಳಿದ್ದಾರೆ.

ಚಿದಾನಂದ ಸವದಿ ಕಾರು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು

ಸಿಎಂ ಯಡಿಯೂರಪ್ಪ ಭ್ರಷ್ಟಾಚಾರ ದಾಖಲೆ ಶೀಘ್ರ ಬಿಡುಗಡೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button