Latest

ಎದೆ ಝಲ್ ಎನಿಸುವ ಭೀಕರ ಘಟನೆ…!

ಆಸ್ಪತ್ರೆಯಲ್ಲೇ ನೇಣು ಬಿಗಿದು ಹೆಣ್ಣು ಶಿಶುವಿನ ಹತ್ಯೆ

 

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಪುರುಷ ಪ್ರಧಾನ ಸಮಾಜದಲ್ಲಿ ಇನ್ನೂ ಹೆಣ್ಣುಮಕ್ಕಳ ಮೇಲಿನ ತಾತ್ಸಾರ ಮುಂದುವರೆದಿದೆ. ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘೋರ ಕೃತ್ಯ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಹೆಣ್ಣುಮಗು ಎಂಬ ಕಾರಣಕ್ಕೆ ಹುಟ್ಟಿದ ನವಜಾತ ಶಿಶುವನ್ನೇ ಆಸ್ಪತ್ರೆಯಲ್ಲಿ ನೇಣುಬಿಗಿದು ಹತ್ಯೆ ಮಾಡಿರುವ ಘಟನೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಆಸ್ಪತ್ರೆ ಶೌಚಾಲಯದ ಕಿಟಕಿಗೆ ನವಜಾತ ಹೆಣ್ಣುಶಿಶುವಿಗೆ ನೇಣು ಬಿಗಿದು ಕಿರಾತಕರು ಕೊಲ್ಲಲು ಯತ್ನಿಸಿದ್ದಾರೆ. ಹೊಕ್ಕುಳುಬಳ್ಳಿ ಕೂಡ ನೇತಾಡುತ್ತಿದ್ದ ಸ್ಥಿತಿಯಲ್ಲಿ ಶಿಶು ಪತ್ತೆಯಾಗಿದ್ದು, ತಕ್ಷಣ ಆಸ್ಪತ್ರೆ ದಾದಿಯರು ಮಗುವನ್ನು ರಕ್ಷಿಸಲು ಮುಂದಾಗಿದ್ದಾರೆ.

ಮಗುವನ್ನು ಕರೆತಂದು ಆಕ್ಸಿಜನ್ ನೀಡಿ ಬದುಕಿಸಲು ಯತ್ನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನವಜಾತ ಶಿಶು ಮೃತಪಟ್ಟಿದೆ. ಮಾನವೀಯತೆ, ಮನುಷತ್ವವನ್ನೂ ಮರೆತು ಕೃತ್ಯವೆಸಗಿರುವ ದುರುಳರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

ಮಿಸ್ಸಿ ರೋಗಕ್ಕೆ 5 ವರ್ಷದ ಬಾಲಕಿ ಬಲಿ

Related Articles

Back to top button