
ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ನಿಕೃಷ್ಟ ತಾಯಿಯೊಬ್ಬಳು 23 ದಿನದ ಹಸುಗೂಸನ್ನು ಸೌದೆಯಂತೆ ಒಲೆಗೆ ಹಾಕಿ ಉರಿಸಿ ಕೊಂದ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಈ ಘಟನೆ ನಡೆದದ್ದು ಜಿಲ್ಲೆಯ ಕಡೂರು ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ. ಹೆಣ್ಣು ಮಗುವೆಂಬ ಕಾರಣಕ್ಕೆ ಹೆತ್ತ ಕಂದಮ್ಮನನ್ನೇ ಉರಿಯುವ ಒಲೆಗೆಹಾಕಿ ಹಾಕಿ ಕೊಂದಿದ್ದಾಳೆ.
ಮಗುವನ್ನ ಒಲೆಗೆ ಹಾಕುವ ಮುನ್ನ ಮಗು ಅಳುತ್ತೆಂದು ಕುತ್ತಿಗೆಯನ್ನ ಕಚ್ಚಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿರೋ ಕಡೂರು ಪೊಲೀಸರು ಪರಮಪಾಪಿ ತಾಯಿ ಸಂಗೀತಾಳನ್ನ ಬಂಧಿಸಿದ್ದಾರೆ.
ಮಗುವನ್ನ ಕೊಲ್ಲಲು ಪ್ರೇರೇಪಿಸಿದರೆಂಬ ಕಾರಣಕ್ಕೆ ಚಂದ್ರಮ್ಮ, ರಮೇಶ್ ಹಾಗೂ ಬಾಬು ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ