ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಸಹೋದ್ಯೋಗಿಗಳ ವಿರುದ್ಧ ಪಿತೂರಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾನ್ಸ್ಟೇಬಲ್ ಓರ್ವರನ್ನು ಅಮಾನತುಗೊಳಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮಂಜುನಾಥ್ ಸಸ್ಪೆಂಡ್ ಆದ ಪೊಲೀಸ್ ಕಾನ್ಸ್ ಟೇಬಲ್. ಕಳ್ಳತನದ ಆರೋಪದ ಹಿನ್ನೆಲೆಯಲ್ಲಿ ಆಟೋಚಾಲಕನೊಬ್ಬನ ಮೇಲೆ ಮೂಡಿಗೆರೆ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಲೋಹಿತ್ ಹಾಗೂ ವಸಂತ ಎಂಬುವವರು ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಸ್ ಪಿ ಉಮಾ ಪ್ರಶಾಂತ್ ಇಬ್ಬರು ಪೇದೆಗಳನ್ನು ಅಮಾನತು ಮಾಡಿದ್ದರು.
ಇಬ್ಬರು ಕಾನ್ಸ್ ಟೇಬಲ್ ವಿರುದ್ಧ ದೂರು ನೀಡಿ, ಹಣ ಪಡೆಯುವಂತೆ ಸಾರ್ವಜನಿಕರ ಮೇಲೆ ಒತ್ತಡ ಹಾಕಿದ್ದ ಕಾನ್ಸ್ಟೇಬಲ್ ಮಂಜುನಾಥ್ ನನ್ನು ಅಮಾನತುಗೊಳಿಸಲಾಗಿದೆ.
ಸರಕಾರಿ ನೌಕರರ ಮುಷ್ಕರ ಫಿಕ್ಸ್: ಷಡಕ್ಷರಿ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ