Latest

*ತಾಯಿ ಎದುರೇ ಹೃದಯಾಘಾತದಿಂದ ಉಸಿರು ಚೆಲ್ಲಿದ ಕಂದಮ್ಮ*

ಪ್ರಗತಿವಾಹಿನಿ ಸುದ್ದಿ: ತಾಯಿ ಎದುರೇ ಒಂದು ವರ್ಷದ ಮಗು ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಅಮೆರಿಕಾದ ಓಹಿಯೋದಲ್ಲಿ ನಡೆದಿದೆ.

Home add -Advt

ಮಗು ಸಾವಿನ ಬೆನ್ನಲ್ಲೇ 23 ವರ್ಷದ ಎಡ್ವರ್ಡ್ ಮುರ್ರೆ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲಿಸರು ಕಂದಮ್ಮನ ಸಾವಿನ ರಹಸ್ಯ ಬಯಲು ಮಾಡಿದ್ದಾರೆ.

ಅಮಿನತಾ ಎಂಬ ಮಹಿಳೆ ತನ್ನ ಒಂದು ವರ್ಷದ ಮಗುವಿನೊಂದಿಗೆ ವಾಸವಾಗಿದ್ದಳು. ಮೂರು ತಿಂಗಳ ಹಿಂದಷ್ಟೇ ಅಮಿನತಾಗೆ ಎಡ್ವರ್ಡ್ ಮುರ್ರೆ ಎಂಬಾತನ ಪರಿಚಯವಾಗಿದೆ. ಅಮಿನತಾ ಮನೆಗೆ ಹೋಗಿದ್ದ ಎಡ್ವರ್ಡ್ ಆಕೆಯ ಮಗು ಕರಿಂ ಜೊತೆ ಆಟವಾಡುತ್ತಾ ಊಟ ಮಾಡಿಸಲು ಮುಂದಾಗಿದ್ದಾನೆ. ಆದರೆ ಮಗು ಊಟ ಮಾಡಲು ನಿರಾಕರಿಸಿದ್ದು, ಹಠ ಹಿಡಿದಿದೆ. ಕೋಪದಲ್ಲಿ ಎಡ್ವರ್ಡ್ ಮಗುವಿಗೆ ರಕ್ತ ಬರುವಂತೆ ಹೊಡೆದಿದ್ದಾನೆ.

ಹೊಡೆದ ಏಟಿಗೆ ಮಗು ಸ್ಥಿತಿ ಗಂಭೀರವಾಗಿದ್ದು, ತೀವ್ರ ರಕ್ತಸ್ರಾವ ಹಾಗೂ ಹೃದಯಾಘಾತಕ್ಕೊಳಗಾಗಿ ತಾಯಿ ಎದುರೇ ಮಗು ಕೊನೆಯುಸಿರೆಳೆದಿದೆ. ಆರೋಪಿ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ.


Related Articles

Back to top button