Kannada NewsKarnataka NewsLatest

ಕೃಷಿಹೊಂಡದಲ್ಲಿ ಬಿದ್ದು ಬಾಲಕ ಸಾವು

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಮುಗಳಿಹಾಳ ಗ್ರಾಮದ ಬಳಿಯ ಹೊಲಕ್ಕೆ  ತನ್ನ ತಂದೆ-ತಾಯಿಯೊಂದಿಗೆ ತೆರಳಿದ್ದ ೪ ವರ್ಷದ ಬಾಲಕ ಆಟ ಆಡುತ್ತ ಕೃಷಿಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಗ್ರಾಮದ ರೈತ ವಿಷ್ಣು ಬನೋಶಿ ಅವರ ಪುತ್ರ ಶ್ರೀನಿವಾಸ (೪) ಮೃತ ಬಾಲಕ. ಸೋಮವಾರ ತನ್ನ ಹೆತ್ತವರ ಜೊತೆ ಹೊಲಕ್ಕೆ ಹೋಗಿ ಹೊಲದಲ್ಲಿ ಆಟವಾಡಿಕೊಂಡಿದ್ದ ಶ್ರೀನಿವಾಸ ಮಧ್ಯಾಹ್ನದ ನಂತರ ನಾಪತ್ತೆಯಾಗಿದ್ದ. ಬಹುಶಃ ಮನೆಗೆ ಮರಳಿರಬಹುದೆಂದು ಭಾವಿಸಿದ ಹೆತ್ತವರು ಸಂಜೆ ಹೊಲದಿಂದ ಮನೆಗೆ ಬಂದು ಆತನಿಗಾಗಿ ಹುಡುಕಾಟ ನಡೆಸಿದಾಗ ಆತ ಪತ್ತೆಯಾಗಿರಲಿಲ್ಲ.

ಮಂಗಳವಾರ ಆತನ ಮೃತದೇಹ ಅವರ ಹೊಲದ ಕೃಷಿ ಹೊಂಡದಲ್ಲಿ ದೊರೆತ ಹಿನ್ನೆಲೆಯಲ್ಲಿ ಆತ ಆಟ ಆಡುತ್ತ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದ್ದು, ಈ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾನಾಪುರದಲ್ಲಿ ಸರಣಿ ಕಳ್ಳತನ

ಪಟ್ಟಣದ ಜನನಿಬಿಡ ಮಾರುಕಟ್ಟೆ ಪ್ರದೇಶದ ಐದು ವಾಣಿಜ್ಯ ಮಳಿಗೆಗಳಿಗೆ ಕನ್ನ ಹಾಕಿದ ಕಳ್ಳರು ಲಕ್ಷಾಂತರ ಮೌಲ್ಯದ ನಗ-ನಾಣ್ಯ ದೋಚಿದ ಘಟನೆ ಮಂಗಳವಾರ ವರದಿಯಾಗಿದೆ.

Home add -Advt

ಪಟ್ಟಣದ ಬೆಳಗಾವಿ ರಸ್ತೆಯ ಕಾವೇರಿ ಹೋಟೆಲ್, ರೇಣುಕಾ ಹೋಟೆಲ್, ಎರಡೂ ಹೋಟೆಲ್ ಮುಂದಿನ ಪಾನ್ ಶಾಪ್ ಗಳು ಮತ್ತು ಜಾಂಬೋಟಿ ವೃತ್ತದಲ್ಲಿರುವ ಒಂದು ಮೊಬೈಲ್ ಅಂಗಡಿ ಸೇರಿದಂತೆ ಒಟ್ಟು ೫ ವಾಣಿಜ್ಯ ಮಳಿಗೆಗಳ ಮೇಲ್ಛಾವಣಿ ಮುರಿದು ಒಳನುಗ್ಗಿದ ಕಳ್ಳರು ಅಂದಾಜು ೬೦ ಸಾವಿರ ನಗದು, ಮೊಬೈಲ್, ದಿನಸಿ ಪದಾರ್ಥಗಳು, ತಂಪು ಪೇಯಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖಾನಾಪುರ ಪೊಲೀಸರು ಘಟನೆಯ ತನಿಖೆ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button