ಬಾಲ್ಯವಿವಾಹಕ್ಕೆ ಬ್ರೇಕ್
ಪ್ರಗತಿವಾಹಿನಿ ಸುದ್ದಿ: ಆಧುನಿಕವಾಗಿ ಪ್ರಪಂಚ ಎಷ್ಟೇ ಮುಂದುವರೆದರೂ, ಶಿಕ್ಷಣಣಿಕ ವ್ಯವಸ್ಥೆ ಎಷ್ಟೇ ಬದಲಾದರೂ ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಎಲ್ಲಿಯೋ ಕುಗ್ರಾಮಗಳಲ್ಲಿ ಮಾತ್ರವಲ್ಲ ರಾಜ್ಯ ರಾಜಧಾನಿ ಬೆಂಗಳೂರಿನ ಬಳಿಯೇ ಇಂತಹ ಪದ್ಧತಿ ನಡೆಯುತ್ತಿರುವುದು ವಿಪರ್ಯಾಸ. ಮಕ್ಕಳಿಗೆ ಶಿಕ್ಷಣ, ಸಾಧನೆಗಳ ಅರಿವು ನೀಡಬೇಕಾದ ಪೋಷಕರೇ ತಮ್ಮ ಮಕ್ಕಳನ್ನು ಬಾಲ್ಯವಿವಾಕ್ಕೆ ದೂಡುತ್ತಿರುವುದು ದುರ್ದೈವದ ಸಂಗತಿ. ಇಲ್ಲೋರ್ವ 15 ವರ್ಷದ ಬಾಲಕಿಗೆ ಪೋಷಕರೇ ವಿವಾಹಕ್ಕೆ ಯತ್ನಿಸಿದ್ದು, ಮದುವೆಯ ವೇಳೆ ಅಧಿಕಾರಿಗಳು ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಹೆತ್ತಮಗಳನ್ನು ಬಾಲ್ಯವಿವಾಹ ಮಾಡಿಕೊಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಅರಿಷಿಣ ಶಾಸ್ತ್ರ, ಆರತಕ್ಷತೆ ಕಾರ್ಯಕ್ರಮವೂ ನಡೆದಿತ್ತು. ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಮಕ್ಕಳ ರಕ್ಷಾಣಧಿಕಾರಿ ಅನಿತಾಲಕ್ಷ್ಮೀ ಧಿಢೀರ್ ದಾಳಿ ನಡೆಸಿದ್ದಾರೆ. ಬಾಲ್ಯವಿವಾಹವನ್ನು ತಡೆದು 15 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ಬಾಲಕಿಯನ್ನು ಮಹಿಳಾ ಕೇಂದ್ರಕ್ಕೆ ರವಾನಿಸಲಾಗಿದೆ. ಬಾಲಕಿಯ ಪೋಷಕರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಕೇಸ್ ದಾಖಲಿಸಿ ವಶಕ್ಕೆ ಪಡೆಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ