ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಬಾಲ್ಯ ವಿವಾಹ ತಡೆಗೆ ಸರ್ಕಾರ, ಅಧಿಕಾರಿಗಳು ಏನೆಲ್ಲ ಪ್ರಯತ್ನ ಮಾಡಿದರೂ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಗುಟ್ಟಾಗಿ ಬಾಲ್ಯ ವಿವಾಹ ಮಾಡಿ, ಯಾರಿಗೂ ಗೊತ್ತಾಗಬಾರದೆಂದು ಬಾಲಕಿಯ ತಾಳಿ, ಕಾಲುಂಗುರ ತೆಗೆಸಿ ಪೋಷಕರೆ ಪರೀಕ್ಷೆಗೆ ಕಳುಹಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಗ್ರಾಮವೊಂದರಲ್ಲಿ ಎಸ್.ಎಸ್.ಎಲ್.ಸಿ ಬಾಲಕಿಗೆ ಕೆ.ಆರ್.ಪೇಟೆ ತಾಲೂಕಿನ ಸಂಬಂಧಿಕರ ಯುವಕನೊಂದಿಗೆ ಮಾರ್ಚ್ 27ರಂದು ಪೋಷಕರು ಮದುವೆ ಮಾಡಿದ್ದಾರೆ. ಬಳಿಕ 28ರಂದು ತಾಳಿ, ಕಾಲುಂಗುರ ಬಿಚ್ಚಿಸಿಕೊಂಡು ಪರೀಕ್ಷೆ ಬರೆಯಲು ಪೋಷಕರು ಕಳುಹಿಸಿದ್ದಾರೆ.
ಪರೀಕ್ಷೆಗೆ ತೆರಳಿದ ಬಾಲಕಿ ತನ್ನ ಸ್ನೇಹಿತೆಗೆ ಈ ವಿಚಾರ ತಿಳಿಸಿದ್ದಾಳೆ. ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ. ಸದ್ಯ ಮಂಡ್ಯದ ಬಾಲಮಂದಿರದಲ್ಲಿ ಬಾಲಕಿ ರಕ್ಷಣೆ ಪಡೆದಿದ್ದು, ಬಾಲ್ಯ ವಿವಾಹ ಮಾಡಿದವರ ವಿರುದ್ಧ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ತುಮಕೂರಿಗೆ ಬಂದಿಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ