*ಮಕ್ಕಳ ಮಾರಾಟ ಹಾಗೂ ಭ್ರೂಣ ಹತ್ಯೆ ಕೇಸ್: ಸ್ಥಳ ಮಹಜರು ವೇಳೆ ಮೂರು ಭ್ರೂಣಗಳ ಅವಶೇಷಗಳು ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿಗೆ ಬೆಳಕಿಗೆ ಬಂದ ಮಕ್ಕಳ ಮಾರಾಟ ಪ್ರಕರಣ ಸ್ಫೋಟಕ ತೀರುವು ಪಡೆದುಕೊಂಡಿದ್ದು, ಆರೋಪಿ ಕಿತ್ತೂರು ಪಟ್ಟಣದಲ್ಲಿ ನಕಲಿ ಕ್ಲಿನಿಕ್ ನಡೆಸುತ್ತಿದ್ದ. ಇದೆ ವೇಳೆ ಭ್ರೂಣ ಹತ್ಯೆ ಮಾಡುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಹೊರ ಬಂದಿದೆ.
ನಕಲಿ ವೈದ್ಯ ಅಬ್ದುಲ್ ಲಾಡಖಾನ್‌ನಿಂದ ಭ್ರೂಣ ಹತ್ಯೆ ಮಾಡಲಾಗುತಿತ್ತು. ಪೊಲೀಸ್ ಕಸ್ಟಡಿಯಲ್ಲಿ ಇರುವ ಆರೋಪಿ ಈ ಬಗ್ಗೆ ಬಾಯಿ ಬಿಟ್ಟಿದ್ದ ಹಾಗಾಗಿ ಇಂದು ಬೆಳಗಾವಿ ಡಿಎಚ್‌ಒ ಡಾ. ಮಹೇಶ ಕೋಣಿ, ಬೈಲಹೊಂಗಲ ಎಸಿ ಪ್ರಭಾವತಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಆರೋಪಿ ತನ್ನ ಫಾರ್ಮ್‌ಹೌಸ್‌ಲ್ಲಿ ಹೂತ್ತಿದ್ದ ಭ್ರೂಣಗಳ ಶೋಧ ಮಾಡಲಾಗಿದೆ. ಸರ್ಚಿಂಗ್ ವೇಳೆ ಮೂರು ಭ್ರೂಣಗಳ ಅವಶೇಷಗಳು ಪತ್ತೆಯಾಗಿದೆ.
ಮೂರು ಭ್ರೂಣಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದ ಬಳಿಕ ಕಾರ್ಯಾಚರಣೆ ಕುರಿತು ಡಿಎಚ್‌ಒ ಡಾ. ಮಹೇಶ ಕೋಣಿ ಪ್ರತಿಕ್ರಿಯೆ ನೀಡಿದ್ದು, ಫಾರ್ಮ್ ಹೌಸ್‌ನ ನಾಲ್ಕು ಕಡೆಗೆ ಅಗೆಯಲಾಗಿದ್ದು, ಮೂರು ಭ್ರೂಣಗಳ ಅವಶೇಷಗಳು ಪತ್ತೆಯಾಗಿವೆ. ನಕಲಿ ವೈದ್ಯನ ಆಸ್ಪತ್ರೆ ಮೇಲೆ ದಾಳಿ ಮಾಡಲಾಗಿದೆ, ಆತನ ಪ್ರಮಾಣ ಪತ್ರ ಪರಿಶೀಲಿಸಲಾಗುತ್ತಿದೆ. ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು. ನಕಲಿ ವೈದ್ಯನ ವಿರುದ್ಧ ಕ್ರಮ ಜರುಗಿಸದ ಟಿಎಚ್‌ಒ ಎಸ್‌ಎಸ್ ಸಿದ್ದಣ್ಣವರಗೆ ನೋಟಿಸ್ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ