ಪ್ರಗತಿವಾಹಿನಿ ಸುದ್ದಿ: ಬಿಕ್ಷಾಟನೆ ಮಾಡಿ, ಜೀವನ ಸಾಗಿಸುತ್ತಿದ ಬಡ ಮಹಿಳೆಯ ಮಗು ಅಪಹರಣ ಆಗಿರುವ ಘಟನೆ ಬಳ್ಳಾರಿ ನಗರದ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.
ಬಿಬಿಫಾತಿಮಾ ಎಂಬ ಮಹಿಳೆಯ ಒಂದು ವರ್ಷ ಮೂರು ತಿಂಗಳ ಗಂಡು ಮಗು ಆಯನ್ ಅಪಹರಣವಾಗಿದೆ. ಏ.28 ರಾತ್ರಿ ಮಗು ಆಯನ್ ಅಪಹರಣವಾಗಿದ್ದು, ಮಗು ಹುಡುಕಿಕೊಡುವಂತೆ ಮಹಿಳೆ ದೂರು ದಾಖಲಿಸಿದ್ದಾಳೆ. ಆದರೆ ಮಗು ಹುಡಕಲು ಪೊಲೀಸ್ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ಬಿಬಿಫಾತಿಮಾ ಅಳಲು ತೊಡಿಕೊಂಡಿದ್ದಾಳೆ.
ವಾರದ ಹಿಂದೆ ಭಿಕ್ಷಾಟನೆ ಜೊತೆಗೆ ಪೆಪರ್ ಆರಿಸುವ ಕೆಲಸ ಮುಗಿಸಿ ರೈಲ್ವೆ ಸ್ಟೇಷನ್ ಮುಂಭಾಗದ ಧ್ವಜ ಸ್ತಂಭದ ಜಾಗದಲ್ಲಿ ಮಗುವಿನೊಂದಿಗೆ ಬಿಬಿಫಾತಿಮಾ ಮಲಗಿದ್ದ ವೇಳೆ ಇದ್ದಕ್ಕಿದ್ದಂತೆ ಮಗು ಕಿಡ್ನಾಪ್ ಆಗಿದೆ.
ಆ ಜಾಗದಲ್ಲೆ ಸುಭಾನಿ ಎಂಬ ಇನ್ನೊಬ್ಬ ಭಿಕ್ಷುಕ ಮಲಗಿದ್ದ ಎನ್ನಲಾಗಿದೆ. ಮಗು ಆಯನ್, ಸುಭಾನಿ ಜೊತೆಗೆ ಆಟವಾಡುತ್ತಿತ್ತು, ಆತನೆ ಮಗು ಅಪಹರಣ ಮಾಡಿದ್ದಾನೆ ಎಂದು ಬಿಬಿಫಾತಿಮಾ ತನ್ನ ಮಗು ಹುಡುಕಿಕೊಡುವಂತೆ ಕಣ್ಣೀರಿಡುತ್ತಿದ್ದಾಳೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ