ಮಕ್ಕಳಿಗೆ ಸ್ವಚ್ಚ ಭಾರತದ ಕನಸು ನನಸಾಗಿಸಲು ಅರಿವು ಮೂಡಿಸಬೇಕು
ಪ್ರಗತಿವಾಹಿನಿ ಸುದ್ದಿ – ಮೂಡಲಗಿ : ಮಕ್ಕಳಿಗೆ ಸ್ವಚ್ಚ ಭಾರತದ ಕನಸು ನನಸಾಗಿಸಲು ಶಾಲೆಗಳಲ್ಲಿ ಅಗತ್ಯ ತಿಳುವಳಿಕೆ ನೀಡಿದಾಗ ಮಾತ್ರ ಭಾಹ್ಯ ಪ್ರಪಂಚದಲ್ಲಿ ಸಾರ್ವಜನಿಕವಾಗಿ ಉಪಯುಕ್ತವಾಗುವ ಪರಿಸರ ನಿರ್ಮಾಣವಾಗಲು ಸಾಧ್ಯ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿ ರಾಜೇಂದ್ರ ಹೇಳಿದರು.
ಅವರು ಸೋಮವಾರ ಕಲ್ಲೋಳ್ಳಿ ಪಟ್ಟಣದ ಸರಕಾರಿ ಹಿರಿಯ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳಿಗೆ ಆಕಸ್ಮಿಕವಾಗಿ ಭೇಟಿ ನೀಡಿದರು. ಮಕ್ಕಳಿಗೆ ಸೃಜನಾತ್ಮಕ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳಲ್ಲಿ ಶಿಸ್ತನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಹಿರಿಯದಾಗಿದೆ.
ಹೆಣ್ಣು ಮಕ್ಕಳಿಗೆ ಸೂಚಿ ಪ್ಯಾಡ್ ಕರಿತು ಜಾಗೃತಿವಹಿಸುವದು ಅತ್ಯವಶ್ಯಕವಾಗಿದೆ. ಮಕ್ಕಳಿಗೆ ಅಗತ್ಯ ಮದ್ಯಾಹ್ನ ಉಪಹಾರ ಯೋಜನೆಯನ್ನು ಕಟ್ಟು ನಿಟ್ಟಾಗಿ ಜಾರಿಯಾಗ ಬೇಕು. ಮಕ್ಕಳ ಮೇಲೆ ವ್ಯತಿರೀಕ್ತವಾದ ಪರಿಣಾಮಗಳಾಗದಂತೆ ಎಚ್ಚರ ವಹಿಸಬೇಕು. ನಿಗದಿತ ಪ್ರಮಾಣದಲ್ಲಿ ದಾಸೋಹ ಯೋಜನೆಗೆ ಆಹಾರಗಳನ್ನು ಬಳಸಿ ಉತ್ಕೃಷ್ಠ ರೀತಿಯಾದ ಊಟ ಕೊಡಬೇಕು ಎಂದು ಹೇಳಿದರು.
ಶುದ್ಧ ಕುಡಿಯುವ ನೀರು, ಶಾಲಾ ಕಟ್ಟಡ, ಮೈದಾನಗಳನ್ನು ಲಭ್ಯ ಅನುದಾನ ಅಥವಾ ಸ್ಥಳೀಯ ಸಂಸ್ಥೆಗಳ ಮೂಲಕ ಅಗತ್ಯ ಕ್ರಮ ಕೈಗೋಳ್ಳಬೇಕು. ವಲಯ ವ್ಯಾಪ್ತಿಯಲ್ಲಿ ಮದ್ಯಾಹ್ನ ಉಪಹಾರ ಯೋಜನೆ ಯಶಸ್ವಿಯಾಗಿ ಜಾರಿಯಾಗುವ ನಿಟ್ಟಿನಲ್ಲಿ ಸಂಬಂಧಿಸಿದವರು ಕಟ್ಟು ನಿಟ್ಟಿನ ಕ್ರಮ ಕೈಗೋಳ್ಳ ಬೇಕು.
ಹೆಣ್ಣು ಮಕ್ಕಳ ಶಾಲೆಯ 7 ನೇ ತರಗತಿಯಲ್ಲಿ ಸ್ಚಚ್ಚ ಭಾರತ ಪರಿಕಲ್ಪನೆಯ ನಾಟಕ ವೀಕ್ಷಿಸಿದರು. ಜ್ಞಾನಗಳ ಕುರಿತಾಗಿ ಪ್ರಾಪಂಚಿಕ ಪ್ರಶ್ನೆಗಳನ್ನು ಕೇಳಿದರು. ಇಂಗ್ಲೀಷ ಬರವಣಿಗೆ ವಿಜ್ಞಾನ ವಿಷಯದ ಜಠರ, ಅನ್ನನಾಳ ಮೂತ್ರನಾಳ ಕರಿತು ಗಂಡು ಮಕ್ಕಳ ಶಾಲೆಯ 8 ನೇ ತರಗತಿ ಮಕ್ಕಳ ಜ್ಞಾನ ಮಟ್ಟ ಪರೀಕ್ಷಿಸಿದರು.
ಶಾಲೆಯಲ್ಲಿ ತಯಾರಿಸಿದ ಬಿಸಿಯೂಟ ಸೇವಿಸಿ ಆಹಾರದ ಗುಣಮಟ್ಟ ಪರಿಶೀಲಿಸಿದರು. ವಲಯ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿಯು ಗುಣಮಟ್ಟದ ಆಹಾರ ಹಾಗೂ ಗುಣಾತ್ಮಕ ಶಿಕ್ಷಣ ಎಲ್ಲ ಮಕ್ಕಳಿಗೂ ಸಿಗುವಂತಾಗಲು ಅಗತ್ಯ ಮೇಲುಸ್ತುವಾರಿ ವಹಿಸಲು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಭೇಟಿ ಸಂದರ್ಭದಲ್ಲಿ ಗೋಕಾಕ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ, ಜಿ.ಪಂ ಅಭಿಯಂತರ ಐ ಎಮ್ ದಫೇದಾರ, ಅಕ್ಷರ ದಾಸೋಹಾಧಿಕಾರಿ ಎ.ಬಿ ಮಲಬನ್ನವರ, ಗ್ರಾಮೀಣ ಸಹಾಯಕ ನಿರ್ಧೇಶಕ ಎಸ್ ಎಚ್ ದೇಸಾಯಿ, ಬಿ.ಆರ್.ಸಿ ಬಿ.ಎಚ್ ಮೋರೆ, ಬಿ.ಆರ್.ಪಿ ಕೆ.ಎಲ್.ಮೀಶಿ, ಸಿ.ಆರ್.ಪಿ ಜಿ ಆರ್ ಉಪ್ಪಾರ, ಪ್ರಧಾನ ಗುರುಗಳಾದ ಎಸ್ ಬಿ ಗೋಸಬಾಲ, ಬಡಿಗೇರ ಹಾಗೂ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ