Kannada NewsKarnataka NewsLatest

ಪೋದಾರ್ ಜಂಬೋ ಕಿಡ್ಸ್ ನಲ್ಲಿ ಸಂಭ್ರಮಿಸಿದ ಮಕ್ಕಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಪೋದಾರ್ ಜಂಬೋ ಕಿಡ್ಸ್ ನಲ್ಲಿ ಮಕ್ಕಳ ದಿನಾಚರಣೆ ದಿನ ಪುಟ್ಟ ಪುಟ್ಟ ಮಕ್ಕಳು ಸಂಭ್ರಮಿಸಿದರು. `ಲೆಟಸ್ ಪ್ಲೇ, ಟು ಫೈಂಡ್ ದ ವೇ’ ಹೆಸರಿನಲ್ಲಿ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಅವರದ್ದೇ ದಿನಾಚರಣೆ ದಿನ ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಆಟ, ಹಾಡು, ನೃತ್ಯ ಮೊದಲಾದವುಗಳ ಮೂಲಕ ಖುಷಿ ನೀಡಲಾಯಿತು. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾದ ಸಣ್ಣ ಪುಟ್ಟ ಆಟಗಳನ್ನು ಆಡಿಸಲಾಯಿತು. ಅವುಗಳ ಕುರಿತು ತಿಳಿವಳಿಕೆ ನೀಡಲಾಯಿತು. ತರಗತಿಯ ಒಳಗೆ ಮತ್ತು ಹೊರಗೆ ಮಕ್ಕಳನ್ನು ಕರೆದೊಯ್ದು ವಿನೂತನವಾದಿ ಚಟುವಟಿಕೆಗಳನ್ನು ಮಾಡಿಸಲಾಯಿತು.

Home add -Advt

ಮಕ್ಕಳ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವ ಪೋದಾರ್ ಜಂಬೋ ಕಿಡ್ಸ್, ಮಕ್ಕಳ ದಿನಾಚರಣೆಯನ್ನೂ ಅಷ್ಟೇ ವಿಶಿಷ್ಟವಾಗಿ ಆಚರಿಸಿತು.

Related Articles

Back to top button