Latest

ಮತಯಂತ್ರಗಳನ್ನು ಒಡೆದು ಪುಡಿಗೈದ ಗ್ರಾಮಸ್ಥರು

ಪ್ರಗತಿವಾಹಿನಿ ಸುದ್ದಿ, ವಿಜಯಪುರ: ಮತ ಯಂತ್ರಗಳನ್ನು ಹೊತ್ತೊಯ್ಯಲಾಗುತ್ತಿದೆ ಎಂಬ ಶಂಕೆಯಿಂದ ಗ್ರಾಮಸ್ಥರು ಮತಯಂತ್ರಗಳನ್ನೇ ಪುಡಿಗೈದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬಸವನಬಾಗೇವಾಡಿ ತಾಲೂಕಿನ ಮಸಬನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮತಯಂತ್ರಗಳನ್ನು ಹೊತ್ತೊಯ್ಯಲಾಗುತ್ತಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಮತಗಟ್ಟೆಯತ್ತ ನುಗ್ಗಿದ ಗ್ರಾಮಸ್ಥರ ಗುಂಪು ಕಾಯ್ದಿರಿಸಿದ್ದ ಮತಯಂತ್ರಗಳು, ವಿವಿ ಪ್ಯಾಟ್ ಗಳನ್ನು ನೆಲಕ್ಕೆ ಬಡಿದು ಧ್ವಂಸಗೈದಿದ್ದಾರೆ.

Home add -Advt

ಮತಯಂತ್ರ ಕೈಕೊಟ್ಟಲ್ಲಿ ಪರ್ಯಾಯವಾಗಿ ಬಳಕೆ ಮಾಡಲು ಕಾಯ್ದಿರಿಸಲಾಗಿದ್ದ ಇವಿಎಂ, ವಿವಿಪ್ಯಾಟ್ ‌ಮಶೀನ್‌ಗಳನ್ನು ಮರಳಿ ತರಲಾಗುತ್ತಿತ್ತು. ಇದನ್ನು ಗಮನಿಸಿ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡದ್ದರಿಂದ ತಪ್ಪು ಭಾವಿಸಿ ರೊಚ್ಚಿಗೆದ್ದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಚುನಾವಣಾಧಿಕಾರಿ ಕಾರನ್ನು ಸಹ ಪುಡಿಗೈದು ಮಗುಚಿ ಹಾಕಿದ್ದಾರೆ.

https://pragati.taskdun.com/heart-attackmandeathbelurupoling-booth/

Related Articles

Back to top button