ಪ್ರಗತಿವಾಹಿನಿ ಸುದ್ದಿ, ಬೀಜಿಂಗ್/ಮಾಸ್ಕೊ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ವಿಷಯದಲ್ಲಿ ಚೀನಾ ಮೂಗು ತೂರಿಸಿದೆ.
ಇಂದಿಗೆ ಬರೊಬ್ಬರಿ ಒಂದು ವರ್ಷದಿಂದ ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಪರಮಾಣು ಅಸ್ತ್ರಗಳನ್ನು ಬಳಸುವ ಬಗ್ಗೆ ಆಡಿದ ಮಾತುಗಳಿಗೆ ಚೀನಾ ಪ್ರತಿಕ್ರಿಯಿಸಿದ್ದು ಉಭಯ ರಾಷ್ಟ್ರಗಳು ಆದಷ್ಟೂ ಶೀಘ್ರ ಶಾಂತಿ ಮಾತುಕತೆ ನಡೆಸಲು ಸಲಹೆ ನೀಡಿದೆ. ರಷ್ಯಾ ಬಿಕ್ಕಟ್ಟಿನ ರಾಜಕೀಯದ ಇತ್ಯರ್ಥಕ್ಕೆ 12 ಅಂಶಗಳನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ “ರಷ್ಯಾ ಮತ್ತು ಉಕ್ರೇನ್ ತಕ್ಷಣವೇ ನೇರ ಸಂವಾದವನ್ನು ಪುನಾರಂಭಿಸಲು ಎಲ್ಲ ಪಕ್ಷಗಳು ಬೆಂಬಲಿಸಬೇಕು” ಎಂದು ಚೀನಾ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಕೋರಿದೆ.
ಪರಮಾಣು ಶಸ್ತ್ರ ಬಳಕೆಗೆ ವಿರೋಧ:
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಉಕ್ರೇನ್ ಮೇಲೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಬೆದರಿಕೆ ಒಡ್ಡಿರುವುದಕ್ಕೆ ಆಕ್ಷೇಪಿಸಿರುವ ಚೀನಾ, ಪರಮಾಣು ಶಸ್ತ್ರಾಸ್ತ್ರಗಳ ಬಳಕೆತಷ್ಟೇ ಅಲ್ಲ, ಅವುಗಳ ಬಳಕೆಯ ಬೆದರಿಕೆ ಹಾಕುವ ಕ್ರಮ ಕೂಡ ಸರಿಯಲ್ಲವೆಂದು ಪ್ರತಿಪಾದಿಸಿದೆ.
ಉಭಯ ದೇಶಗಳು ಯುದ್ಧದ ಸಂದರ್ಭದಲ್ಲಿ ಪರಮಾಣು ಅಸ್ತ್ರಗಳನ್ನು ಬಳಸುವ ಮೂಲಕ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿದಂತಾಗುತ್ತದೆ. ಹಾಗಾಗಿ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಾಗರಿಕರು ಅಥವಾ ನಾಗರಿಕ ಸೌಲಭ್ಯಗಳ ಮೇಲೆ ದಾಳಿ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಚೀನಾ ಸಲಹೆ ನೀಡಿದೆ.
ಮಿತ್ರ ರಾಷ್ಟ್ರ ರಷ್ಯಾದೊಂದಿಗೆ ನಿಕಟ ಸಂಬಂಧ ಉಳಿಸಿಕೊಂಡು ಈ ಯುದ್ಧದಲ್ಲಿ ತಟಸ್ಥವಾಗಿ ತನ್ನ ಸ್ಥಾನವನ್ನು ಪಡೆದುಕೊಳ್ಳಲು ಚೀನಾ ಪ್ರಯತ್ನಿಸಿದೆ.
ಚೀನಾದ ಉನ್ನತ ರಾಜತಾಂತ್ರಿಕ ವಾಂಗ್ ಯಿ ಅವರು, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಮಾಸ್ಕೋದಲ್ಲಿ ಬುಧವಾರ ಭೇಟಿಯಾಗಿ ಸಮಾಲೋಚಿಸಿದ್ದಾರೆ.
ಝೆಲೆನ್ ಸ್ಕಿ ಶ್ಲಾಘನೆ:
ಉಕ್ರೇನ್ ಅಧ್ಯಕ್ಷ ವ್ಲಾದಿಮೀರ್ ಝೆಲೆನ್ಸ್ಕಿ ಅವರು ಚೀನಾ ನಡೆಗೆ ಶ್ಲಾಘನೆ ವ್ಯಕ್ತಪಡಿಸಿ, ”ಚೀನಾ ದೇಶ ಇದೀಗ ಉಕ್ರೇನ್ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಲ್ಲದೆ ಉತ್ತಮ ಸಲಹೆಗಳನ್ನು ನೀಡಿರುವುದು ಜಾಗತಿಕ ಮಟ್ಟದಲ್ಲಿ ಉತ್ತಮ ಸಂದೇಶಗಳನ್ನು ರವಾನಿಸಿದೆ. ನಾವು ಚೀನಾದೊಂದಿಗೆ ಸಭೆ ನಡೆಸಲು ಆಸಕ್ತರಿದ್ದು, ಅವರು ನೀಡುವ ಅಂತಿಮ ತೀರ್ಮಾನಗಳನ್ನು ನೋಡಿದ ನಂತರ, ನಮ್ಮ ತೀರ್ಮಾನಗಳನ್ನು ತಿಳಿಸುತ್ತೇವೆ” ಎಂದು ಹೇಳಿಕೊಂಡಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲು ಶುರುಮಾಡಿದಾಗಿನಿಂದ ಪುಟಿನ್‌ಗೆ ರಾಜತಾಂತ್ರಿಕ ಮತ್ತು ಆರ್ಥಿಕ ಬೆಂಬಲವನ್ನು ಚೀನಾ ಕೊಟ್ಟಿತ್ತು. ಆದರೆ ಬಹಿರಂಗವಾಗಿ ಸೈನ್ಯದ ಸಹಾಯ ಅಥವಾ ಮಾರಕ ಶಸ್ತ್ರಾಸ್ತ್ರಗಳ ಪೂರೈಕೆ ವಿಚಾರದಿಂದ ದೂರವೇ ಉಳಿದಿತ್ತು.
ಚೀನಾದ ರಾಜ್ಯ-ನಿಯಂತ್ರಿತ ಸಂಸ್ಥೆಗಳು, ಮಾರಕವಲ್ಲದ ಡ್ರೋನ್‌ಗಳು ಮತ್ತು ಇತರ ಉಪಕರಣಗಳನ್ನು ರಷ್ಯಾ ಮತ್ತು ಉಕ್ರೇನ್‌ಗೂ ಮಾರಾಟ ಮಾಡಿದೆ. ಆದರೆ ಮಾನವರಹಿತ ವೈಮಾನಿಕ ವಾಹನಗಳಂತಹ ತೀರ ಅಗತ್ಯವಿರುವ ಸಲಕರಣೆಗಳ ಸರಬರಾಜುಗಳಿಗಾಗಿ ರಷ್ಯಾ ಇರಾನ್‌ನ ಹೋಗಬೇಕಾಗಿತ್ತು. ಉತ್ತರ ಕೊರಿಯಾ ರಾಕೆಟ್ ಮತ್ತು ಫಿರಂಗಿ ಶೆಲ್‌ಗಳನ್ನು ಒದಗಿಸಿರುವುದಾಗಿ ಅಮೆರಿಕ ಇತ್ತೀಚೆಗಷ್ಟೇ ಹೇಳಿತ್ತು.
ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗೆ ಪತಿ ವಿಯೋಗ
https://pragati.taskdun.com/former-president-pratibha-patils-husband-devisingh-shekhavat-passes-away/
https://pragati.taskdun.com/pratap-simhasiddaramaiahgovttaliban-sarkara/
ಸಾಮೂಹಿಕ ಲಲಿತಾ ಸಹಸ್ರನಾಮ ಪಠಣ: ಮಹಿಳೆಯರಿಗೆ ಆಹ್ವಾನ
https://pragati.taskdun.com/mass-lalita-sahasranama-chanting-an-invitation-to-women/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ