Latest

ವಿಚ್ಛೇಧನಕ್ಕೆ ಕಾರಣವಾಯ್ತು ಪತಿ-ಪತ್ನಿ ಬ್ರಾ ಜಗಳ

ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣ ಆರಂಭವಾಗುವ ಪತಿ-ಪತ್ನಿಯ ನಡುವಿನ ಜಗಳ ವಿಚ್ಛೇಧನಕ್ಕೆ ಕಾರಣವಾಗುತ್ತಿದೆ. ಇಂಥದ್ದೇ ಘಟನೆ ಚೀನಾದ ಗುಂಜಾವೋ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ.

ಪತಿ ತನಗೆ ಚಿಕ್ಕ ಬ್ರಾ ಉಡುಗೊರೆ ನೀಡಿದ ಎಂಬ ಕಾರಣಕ್ಕೆ ಪತ್ನಿ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ನಡೆದಿದೆ. ಲುವೋ ಹಾಗೂ ಯಾಂಗ್ ವಿವಾಹವಾಗಿ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ ಪತಿ ತನ್ನ ಪತ್ನಿಗೆ ಬ್ರಾವೊಂದನ್ನು ಗಿಫ್ಟ್ ನೀಡಿದ್ದ. ಆದರೆ ಆ ಬ್ರಾ ಅಳತೆ ಚಿಕ್ಕದಾಗಿದ್ದರಿಂದ ಪತ್ನಿ ಪತಿಯ ವಿರುದ್ಧ ಸಿಡಿದೆದ್ದಿದ್ದಾಳೆ.

ತನ್ನ ಬ್ರಾ ಸೈಜನ್ನೇ ಅರಿಯದ ಪತಿ ಮುಂದೆ ಜೀವನ ಪರ್ಯಂತ ತನ್ನ ಹೇಗೆ ನೋಡಿಕೊಳ್ಳಲು ಸಾಧ್ಯ ಎಂದು ವಿಚ್ಛೇಧನಕ್ಕಾಗಿ ಪಟ್ಟು ಹಿಡಿದಿದ್ದಾಳೆ. ಮಗಳ ವಾದವನ್ನು ಪೋಷಕರು ಸಮರ್ಥಿಸಿದ್ದಾರೆ ಎನ್ನಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button