Latest

*ನಿಮ್ಮ ಹಣೆ ಬರಹವನ್ನು ನೀವೇ ಬರೆಯಬೇಕು: ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಸಲಹೆ*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ನಿಮ್ಮ ಹಣೆ ಬರಹವನ್ನು ನೀವೇ ಬರೆಯಬೇಕು. ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ ಜಗತ್ತನ್ನೇ ಗೆಲ್ಲಬಹುದು. ಆತ್ಮವಿಶ್ವಾಸವಿದ್ದರೆ ದೇವರೂ ನಿಮ್ಮನ್ನು ಮೆಚ್ಚುತ್ತಾನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಚೌಗಲೆ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಸಾಮಾನ್ಯ ಶಿಕ್ಷಕ ಚೌಗಲೆ
ಚೌಗಲೆ ಅವರನ್ನು 25 ವರ್ಷಗಳಿಂದ ಬಲ್ಲೆ. ಬಹಳ ಬುದ್ದಿವಂತರು ಹಾಗೂ ಶ್ರಮಜೀವಿ. ವಿದ್ಯಾರ್ಥಿಯಂತೆ ಆಲೋಚನೆ ಮಾಡುವ ಸ್ವಭಾವದವರು. ಸಾಮಾನ್ಯ ವಿದ್ಯಾರ್ಥಿಗಳ ಬಗ್ಗೆ ಚಿಂತನೆ ಮಾಡುವ ಅಸಾಮಾನ್ಯ ಶಿಕ್ಷಕರು ಚೌಗಲೆ ಅವರು. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಬಹಳ ಅದೃಷ್ಟವಂತರು. ಅವರ ಸಂಸ್ಥೆಯಲ್ಲಿ ಓದುವವರು ಯಶಸ್ವಿಯಾಗುತ್ತಾರೆ. ಇದಕ್ಕೆ ಅವರ ಪ್ರಾಮಾಣಿಕತೆ, ಒಳ್ಳೆ ಮನಸ್ಸಿನ ಶಿಕ್ಷಕರು. ನಿಮ್ಮ ಬದುಕೇ ನಿಮ್ಮ ಕೈಯಲ್ಲಿದೆ. ಶ್ರಮಪಟ್ಟರೆ ಮಾತ್ರ ಹಣೆಬರಹವನ್ನು ತಿದ್ದಬಹುದು ಎಂದರು.

ತಾರ್ಕಿಕವಾಗಿ ಚಿಂತನೆ
ಯಾಕೆ, ಏನು, ಎಲ್ಲಿ, ಯಾವುದು ಎಂಬ ಪ್ರಶ್ನೆಗಳನ್ನು ಹಾಕಬೇಕು. ಆಗ ಮಾತ್ರ ತಾರ್ಕಿಕವಾಗಿ ಚಿಂತಿಸುವ ಗುಣ ಬೆಳೆಯುತ್ತದೆ. ಒಮ್ಮೆ ವಿದ್ಯಾರ್ಥಿಯಾದರೆ, ನಿಮ್ಮ ಜೀವನದ ಕೊನೆಯವರೆಗೂ ವಿದ್ಯಾರ್ಥಿಯಾಗಿಯೇ ಉಳಿಯಬೇಕು. ಜೀವನ ಮೊದಲು ಪರೀಕ್ಷೆ ನೀಡಿ ನಂತರ ಪಾಠವನ್ನು ಕಲಿಸುತ್ತದೆ. ಅದಕ್ಕೆ ತಯಾರಾಗಲು ತಾರ್ಕಿಕ ಚಿಂತನೆ, ಪರಿಶ್ರಮ, ಪ್ರಾಮಾಣಿಕತೆ ಇರಬೇಕು. ನೀವು ಕಲಿತ ಶಾಲೆ ಶಿಕ್ಷಕರು ಹಾಗೂ ತಂದೆತಾಯಿಗಳು ನಿಮ್ಮ ಬಗ್ಗೆ ಹೆಮ್ಮೆ ಪಡುವಂತೆ ನೀವು ಬದುಕಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

*ರಕ್ತದಲ್ಲಿ ನಾನು ಪತ್ರ ಬರೆದಿದ್ದಕ್ಕೇ ಮಹದಾಯಿ ಕಾಮಗಾರಿ ಪ್ರಾರಂಭ*

https://pragati.taskdun.com/mahadai-rivercm-bommaihubli/

*ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಐದು ದಿನ ಭಾರಿ ಮಳೆ*

https://pragati.taskdun.com/karnataka5daysrainimd/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button