ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜೀವನದಲ್ಲಿ ಹಲವು ಕನಸುಗಳನ್ನು ಹೊತ್ತು ಬೆಂಗಳೂರಿಗೆ ತೆರಳಿ ಕೆಲಸಕ್ಕೆ ಸೇರಿದ್ದ 19ರ ಯುವತಿಯೋರ್ವಳು ಗುರುವಾರ ಬೆಳಗಾವಿಯಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಾಳೆ.
ಬೈಲಹೊಂಗಲ ಮೂಲದ ಇರ್ಷಾದ್ ಸವದತ್ತಿ ಎನ್ನುವ ಆಟೋಚಾಲಕರೋರ್ವರ ಮಗಳು ತಬ್ಸುಮ್ ಕೊಲೆಯಾದ ಯುವತಿ. ತಬ್ಸುಮ್ ಗಗನಸಖಿಯಾಗುವ ಕನಸು ಹೊತ್ತಿದ್ದಳು. ಕೆಲಸದ ಅನುಭವಕ್ಕಾಗಿ ಬೆಂಗಳೂರಿಗೆ ತೆರಳಿ ಕಾಲ್ ಸೆಂಟರ್ ಒಂದರಲ್ಲಿ ಸೇರಿದ್ದಳು.
ಮಂಗಳವಾರ ರಾತ್ರಿ ಫೋನ್ ಮಾಡಿ ಮನೆಗೆ ಬರುತ್ತಿರುವುದಾಗಿ ಹೇಳಿದ್ದಳು. ಆದರೆ ಬುಧವಾರ ಬೆಳಗ್ಗೆ ಆಕೆ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದು ಪಾಲಕರು ಧಾವಿಸಿಬಂದು ನೋಡಿದಾಗ ನಿತ್ರಾಣ ಸ್ಥಿತಿಯಲ್ಲಿದ್ದಳು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಗುರುವಾರ ಬೆಳಗ್ಗೆ ಆಕೆ ಕೊನೆಯುಸಿರೆಳೆದಿದ್ದಾಳೆ.
ಆಗಿದ್ದೇನು?
ತಬ್ಸುಮ್ ಬುಧವಾರ ಬೆಳಗ್ಗೆ ಬೆಳಗಾವಿಗೆ ಬಂದಿದ್ದಾಳೆ. ಅವಳನ್ನು ಯುವಕನೋರ್ವ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾನೆ. ಆಸ್ಪತ್ರೆಯವರು ಎಂಎಲ್ ಸಿ ಮಾಡಬೇಕೆಂದು ಹೇಳಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಹೋಗುವಾಗ ತಬ್ಸುಮ್ ಳ ಸಿಮ್ ಕಾರ್ಡನ್ನೂ ಕೊಂಡೊಯ್ದಿದ್ದಾನೆ.
ಸಂಜೆ ತಬ್ಸುಮ್ ಮೊಬೈಲ್ ನಿಂದಲೇ ಆಕೆಯ ತಾಯಿಗೆ ಮೆಸೇಜ್ ಮಾಡಿ, ಬಸ್ ಇಳಿಯುವಾಗ ತಬ್ಸುಮ್ ಮೊಬೈಲ್ ಬಿದ್ದು ಒಡೆದುಹೋಗಿದೆ. ಹಾಗಾಗಿ ಅವಳ ಸಿಮ್ ನ್ನು ನನ್ನ ಮೊಬೈಲ್ ಗೆ ಹಾಕಿಕೊಂಡಿದ್ದೇನೆ. ಅವಳ ಮೊಬೈಲ್ ಚಿಕ್ಕ ಬ್ಯಾಗ್ ನಲ್ಲಿದೆ. ಈಗ ಸಿಮ್ ನ್ನು ಮುರಿದು ಹಾಕುತ್ತೇನೆ. ನನಗೆ ತೊಂದರೆ ಕೊಡಬೇಡಿ ಎಂದಿದ್ದಾನೆ.
ತಬ್ಸುಮ್ ತಲೆಯ ಹಿಂಭಾಗದಲ್ಲಿ ಗಾಯಗಳಿವೆ. ಮೈಮೇಲೆ ಸಿಗರೇಟ್ ನಿಂದ ಸುಟ್ಟ ಗಾಯಗಳಿವೆ ಎಂದು ಆಕೆಯ ಸಂಬಂಧಿಕರು ಹೇಳುತ್ತಿದ್ದಾರೆ.
ತಬ್ಸುಮ್ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಇದೊಂದು ಕೊಲೆ. ಹಾಗಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ ಯಾರು ಎನ್ನುವುದು ನಿಗೂಢವಾಗಿದೆ.
ಹುಡುಗಿ ದುಪಟ್ಟಾ ಎಳೆದು ಜೈಲಿಗೆ ಹೋದ ಯುವಕ
https://pragati.taskdun.com/latest/a-youth-who-pulled-a-girls-dupatta-with-sexual-intent-jailed/
https://pragati.taskdun.com/latest/bangalorecid-crime-brancharrested-3-man-nude-video-blackmail-case/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ