Belagavi NewsBelgaum NewsKannada NewsKarnataka NewsNational

*ಸಿನಿಮೀಯ ರೀತಿಯಲ್ಲಿ ವ್ಯಕ್ತಿ ಅಪಹರಣ: ಐದು ಕೋಟಿಗೆ ಬೇಡಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿನಿಮೀಯ ರೀತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ. 

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ದಂಡಾಪುರ ಕ್ರಾಸ್ ಬಳಿ ಅಪಹರಣ ನಡೆದಿದೆ. ರಾಜಾಪುರ ಗ್ರಾಮದ ನಿವಾಸಿ ಬಸವರಾಜ್ ತಳವಾರ(48)ನನ್ನು  ಅಪಹರಿಸಲಾಗಿದೆ.

ಫೆ.14 ರಂದು ರಾತ್ರಿ ಬಸವರಾಜ್ ನನ್ನು ಅಪಹರಣ ಮಾಡಲಾಗಿದೆ. ನಿನ್ನೆ ತಡರಾತ್ರಿ ಐದು ಕೋಟಿ ಹಣವನ್ನು ಕೊಟ್ಟು ‌ಬಸವರಾಜ್ ನನ್ನ ಬಿಡಿಸಿಕೊಂಡು ಹೋಗುವಂತೆ ಅಪಹರಣಕಾರರು ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ. ಹಣ ತೆಗೆದುಕೊಂಡು ಬಸವರಾಜ್ ಸಂಬಂಧಿಕರು ಹೇಳಿದ ಸ್ಥಳಕ್ಕೆ ತೆರಳಿದ್ದರು. ಆದರೆ ಅಪಹರಣಕಾರರು ಅಲ್ಲಿಂದ ಪರಾರಿಯಾಗಿ, ನೀವು ಒಬ್ಬರೇ ಬರಬೇಕು. ಹೆಚ್ಚು ಜನರು ಬಂದಲ್ಲಿ ಬಸವರಾಜನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಫೋನ್ ಮಾಡಿದ್ದಾರೆ.

ನಿನ್ನೆ ತಡಾರಾತ್ರಿ ಬಸವರಾಜ್ ಕುಟುಬಸ್ಥರು ಘಟಪ್ರಭಾ ಠಾಣೆಗೆ ದೂರು ನೀಡಿದ್ದಾರೆ. ಸಧ್ಯ ಫೋನ್ ಲೊಕೇಷನ್ ಆಧರಿಸಿ ಅಪಹರಣಕಾರರ ಪತ್ತೆಗೆ ಪೊಲೀಸರು ಸಜ್ಜಾಗಿದ್ದಾರೆ. ಸಧ್ಯ ಅಪಹರಣಕಾರರ ತಂಡ ನಿಪ್ಪಾಣಿಯಲ್ಲಿರುವ ಮಾಹಿತಿ ದೊರೆತಿದ್ದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Home add -Advt

Related Articles

Back to top button