Latest

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ

 ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕಾನ್ಸ್ ಟೇಬಲ್/ಫೈರ್ ಮೆನ್ ಗಳ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಿಐ ಎಸ್ ಎಫ್ ನ ಒಟ್ಟು 1149 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿದಾರರು 12ನೇ ತರಗತಿ ಉತ್ತೀರ್ಣರಾಗಿರಬೇಕು. ಇಲ್ಲವೇ ಸೈನ್ಸ್ ಸ್ಟ್ರೀಮ್ ನಿಂದ ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯದಿಂದ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

Home add -Advt

ಅಭ್ಯರ್ಥಿಗಳ ವಯೋಮಿತಿ 18-23 ವರ್ಷಗಳ ಒಳಗಿರಬೇಕು. ಮೀಸಲಾತಿ ವರ್ಗಗಳ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 21,700 ರಿಂದ 69,100 ರೂ ವರೆಗೆ ಮಾಸಿಕ ವೇತನ ಸಿಗಲಿದೆ.

ಪುರುಷ ಅಭ್ಯರ್ಥಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ cisfrectt.in ಮೂಲಕ ಅರ್ಜಿ ಸಲ್ಲಿಸಬಹುದು.

Related Articles

Back to top button