Karnataka NewsLatest

ಲಕ್ಷ್ಮಿ ಹೆಬ್ಬಾಳಕರ್ ನಾಫಲಕಕ್ಕೆ ಕಾಯಿ ಒಡೆದು ಪೂಜೆ ಸಲ್ಲಿಸಿದ ನಾಗರಿಕರು

ಅಭಿವೃದ್ಧಿ ವಿರೋಧಿಗಳಿಗೆ ಧಿಕ್ಕಾರ ಹಾಕಿದ ನಾಗರಿಕರು

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಮಹಾಬಲೇಶ್ವರ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಕಾಮಗಾರಿಗಳ ವಿವರಗಳನ್ನೊಳಗೊಂಡ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಫೋಟೋ ಹೊಂದಿರುವ ಫಲಕಕ್ಕೆ ಸ್ಥಳೀಯ ನಾಗರಿಕರು ಕಾಯಿ ಒಡೆದು ಪೂಜೆ ಸಲ್ಲಿಸಿದರು.

ಈ ಮೊದಲು ಕಾಮಗಾರಿ ಗುತ್ತಿಗೆದಾರರು, ಅಧಿಕಾರಿಗಳು ಅಳವಡಿಸಿದ್ದ ಫಲಕದ ಮೇಲೆ ಮಂಗಳವಾರ ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ ಜಾಧವ ನೇತೃತ್ವದಲ್ಲಿ ಕೆಲವರು ಬೇರೆ ಫಲಕ ಅಳವಡಿಸಿ ಮುಚ್ಚಿದ್ದರು.

ಇದರಿಂದ ಆಕ್ರೋಶಗೊಂಡ ಸ್ಥಳೀಯ ನಾಗರಿಕರು ಬುಧವಾರ ಮುಚ್ಚಲಾಗಿದ್ದ ಫಲಕ ತೆಗೆದು ಲಕ್ಷ್ಮಿ ಹೆಬ್ಬಾಳಕರ್ ಅವರ ಫೋಟೋ ಇರುವ ಫಲಕಕ್ಕೆ ಕಾಯಿ ಒಡೆದು ಪೂಜೆ ಸಲ್ಲಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳೂ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಸಹಿಸದ ಕೆಲವರು ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ನಿದ್ದೆಯಿಂದ ಎಚ್ಚೆತ್ತವರಂತೆ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ನಿಜವಾಗಿ ಅವರಿಗೆ ಕಳಕಳಿ ಇದ್ದರೆ ಅಭಿವೃದ್ಧಿ ಮಾಡಿತೋರಿಸಲಿ. ಬೆಲೆ ಏರಿಕೆ ತಡೆದು ಜನರಿಗೆ ಸಹಾಯ ಮಾಡಲಿ. ಅದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ನಾಗರಿಕರು ಎಚ್ಚರಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರಯತ್ನ ಮಾಡದಿದ್ದರೆ ಸ್ಮಾರ್ಟ್ ಸಿಟಿ ಯೋಜನೆ ಕೇವಲ ನಗರಕ್ಕೆ ಸೀಮಿತವಾಗುತ್ತಿತ್ತು. ಅವರ ಪ್ರಯತ್ನದಿಂದಾಗಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಮ್ಮ ಪ್ರದೇಶಗಳಿಗೆ ಕೂಡ ಅನುದಾನ ಬರುವಂತಾಗಿದೆ. ಲಕ್ಷ್ಮಿ ಹೆಬ್ಬಾಳಕರ್ ಅವರು ಅಧಿಕಾರಿಗಳೊಂದಿಗೆ ಅಕ್ಷರಶಃ ಜಗಳ ಮಾಡಿ ಗ್ರಾಮೀಣ ಕ್ಷೇತ್ರಕ್ಕೂ ಅನುದಾನ ತಂದಿದ್ದಾರೆ. ಅದನ್ನು ಎಲ್ಲರೂ  ಸ್ವಾಗತಿಸಬೇಕು. ಈಗ ಈ ರೀತಿ ಅಸಹ್ಯ ರಾಜಕೀಯ ಮಾಡುತ್ತಿರುವವರು ಇಷ್ಟು ವರ್ಷ ಎಲ್ಲಿದ್ದರು ಎಂದು ಪ್ರಶ್ನಿಸಿದರು.

ಅಭಿವೃದ್ಧಿ ವಿರೋಧಿಗಳಿಗೆ ಧಿಕ್ಕಾರ ಎಂದು ಕೂಗಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ವನಿತಾ ಗೊಂಧಳಿ, ಪ್ರವೀಣ ಗೊಂಧಳಿ, ಸತೀಶ್ ಗುಡಗ್ಯಾನಟ್ಟಿ, ದೀಪಕ್ ಬುರುಡ, ದತ್ತು ಗೋಂಧಳಿ, ಭೀಮಪ್ಪ ಮೆಳವಂಕಿ, ಇಮ್ತಿಯಾಜ್ ಬಾಂಗಿ, ನಾಗನೂರು, ಹತ್ತಿ ಮೊದಲಾದವರಿದ್ದರು.

ಬಂಗಾರ ಕೊಳ್ಳುವ ಪ್ಲಾನ್ ಇದೆಯೇ? ಹಾಗಾದರೆ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button