Latest

ಸಿಟಿ ಬ್ಯಾಂಕ್ ಎಡವಟ್ಟು; 3,600 ಕೋಟಿ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿ; ವಾಷಿಂಗ್ಟನ್: ಬ್ಯಾಂಕಿಂಗ್ ವ್ಯವಹಾರದಲ್ಲಿನ ಎಡವಟ್ಟಿನಿಂದಾಗಿ ಸಿಟಿ ಬ್ಯಾಂಕ್ ಕೆಲವು ಆರ್ಥಿಕ ಸಂಸ್ಥೆಗಳಿಗೆ 3,600 ಕೋಟಿ ರೂಪಾಯಿ ವರ್ಗಾವಣೆ ಮಾಡಿದೆ.

ಇದನ್ನು ಸರಿಪಡಿಸುವಂತೆ ಬ್ಯಾಂಕ್ ನ್ಯಾಯಾಲಯದ ಮೆಟ್ಟಿಲೇರಿದ್ದು, ವಹಣ ವರ್ಗಾವಣೆ ರದ್ದು ಮಾಡಲು ಜಿಲ್ಲಾ ನ್ಯಾಯಾಲಯ ನಿರಾಕರಿಸಿದೆ.

ಕೆಲವು ಲೇವಾದೇವಿ ಸಂಸ್ಥೆಗಳು ಹೆಚ್ಚುವರಿಯಾಗಿ ಬಂದಿರುವ ಹಣ ಹಿಂತಿರುಗಿಸಲು ಸಮ್ಮತಿಸಿವೆ. ಇನ್ನು ಕೆಲವು ಪ್ರತಿಷ್ಟಿತ ಹಣಕಾಸು ಸಂಸ್ಥೆಗಳು ಬಂದಿರುವ ಬೋನಸ್ ಹಣ ಹಿಂತಿರುಗಿಸಲು ನಿರಾಕರಿಸಿವೆ.

ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸಿಟಿ ಬ್ಯಾಂಕ್ ಹೇಳಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button