Latest

ಮುಂಬೈನಿಂದ ಬಂದ ಪ್ರಯಾಣಿಕರು ಪೊಲೀಸರ ಎದುರೇ ಪರಾರಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಂಬೈನಿಂದ ಆಗಮಿಸಿದ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗದೇ ಆಟೋ ಹತ್ತಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮುಂಬೈನಿಂದ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಇಂದು 1700ಕ್ಕೂ ಹೆಚ್ಚು ಪ್ರಯಾಣಿಕರು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದು, ಅದರಲ್ಲಿ ಇಬ್ಬರು ಪ್ರಯಾಣಿಕರು ಪೊಲೀಸರ ಮುಂದೆಯೇ ಆಟೋ ಹತ್ತಿ ಎಕೇಪ್ ಆಗಿದ್ದಾರೆ.

ರೈಲಿನಲ್ಲಿ ರಾಜ್ಯದ ಕಾರ್ಮಿಕರು ಆಗಮಿಸಿರಬಹುದು ಎಂಬ ಗೊಂದಲಕ್ಕೀಡಾದ ಪೊಲೀಸರು ಹಾಗೂ ಅಧಿಕಾರಿಗಳು ಇಬ್ಬರು ಪ್ರಯಾಣಿಕರ ತಪಾಸಣೆ ಕೂಡ ನಡೆಸಿಲ್ಲ. ಇದೇ ವೇಳೆ ಪ್ರಯಾಣಿಕರು ಆಟೋ ಹತ್ತಿ ಪರಾರಿಯಾಗಿದ್ದಾರೆ. ಇದರಿಂದ ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಮಹಾರಾಷ್ಟ್ರ, ಮುಂಬೈನಿಂದ ಬಂದಿರುವವರಿಂದ ಕೊರೊನಾ ಸೋಂಕು ಹೆಚ್ಚುತಿದ್ದು, ಈ ಹಿನ್ನಲೆಯಲ್ಲಿ ಎಸ್ಕೇಪ್ ಆಗಿರುವ ಪ್ರಯಾಣಿಕರಿಂದಾಗಿ ರಾಜಧಾನಿಯಲ್ಲಿ ಆತಂಕ ಮನೆ ಮಾಡಿದೆ.

Home add -Advt

Related Articles

Back to top button