ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕ್ಲಬ್ ಹೌಸ್ ಇತ್ತೀಚಿನ ದಿನಗಳಲ್ಲಿ ತುಂಬಾ ಜನಪ್ರಿಯವಾಗುತ್ತಿರುವ ಸಾಮಾಜಿಕ ಜಾಲತಾಣವಾಗಿದೆ. ಕೆಲವೇ ತಿಂಗಳುಗಳಲ್ಲಿ ಸಾವಿರಾರು ಕ್ಲಬ್ ಹೌಸ್ ಗಳು ಹುಟ್ಟಿಕೊಂಡಿವೆ. ಪ್ರತಿ ದಿನ ನೂರಾರು ಕ್ಲಬ್ ಹೌಸ್ ಗಳು ಹೊಸದಾಗಿ ಸೇರ್ಪಡೆಯಾಗುತ್ತಿವೆ. ವಿಶ್ವದಲ್ಲಿ ಲಕ್ಷಾಂತರ ಜನರು ಕ್ಲಬ್ ಹೌಸ್ ಗೆ ಹೊಸದಾಗಿ ಸದಸ್ಯರಾಗುತ್ತಿದ್ದಾರೆ. ಕೊರೋನಾದಂತಹ ಇಂದಿನ ದಿನಗಳಲ್ಲಿ ಕ್ಲಬ್ ಹೌಸ್ ಉತ್ತಮ ಅವಕಾಶ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸೆಕ್ಸ್ ಕುರಿತು ಚರ್ಚಿಸುವುದಕ್ಕೆಂದೇ ವಿದೇಶಗಳಲ್ಲಿ ನೂರಾರು ಕ್ಲಬ್ ಹೌಸ್ ಗಳು ಹುಟ್ಟಿಕೊಳ್ಳುತ್ತಿವೆ. ಸೆಕ್ಸ್ ಕುರಿತು ಮಾತನಾಡುವುದೇ ಅಪರಾಧ ಎನ್ನುವ ಸ್ಥಿತಿ ಭಾರತದಲ್ಲಿ ಇನ್ನೂ ಹೋಗಿಲ್ಲ. ಆದರೆ ನೂರಾರು ಕ್ಲಬ್ ಹೌಸ್ ಗಳಲ್ಲಿ ದಿನ-ರಾತ್ರಿ ಎನ್ನದೆ ಸೆಕ್ಸ್ ವಿಷಯದ ಚರ್ಚೆಗಳೇ ನಡೆದಿರುತ್ತವೆ.
ಭಾರತದಲ್ಲಿ ವಿಶೇಷವಾಗಿ ಮಲೆಯಾಳಿ ಭಾಷೆಯಲ್ಲಿ ಸೆಕ್ಸ್ ಕುರಿತು, ಅದರಲ್ಲೂ ಮಹಿಳೆಯರ ಸೆಕ್ಸ್ ಕುರಿತು ಚರ್ಚಿಸಲೆಂದೇ ಕ್ಲಬ್ ಹೌಸ್ ಹುಟ್ಟಿಕೊಂಡಿದೆ. ಅಲ್ಲಿ ಪ್ರತಿ ದಿನ ಸೆಕ್ಸ್ ವಿಷಯಗಳು ಚರ್ಚಿಸಲ್ಪಡುತ್ತಿವೆ. ವಿಶೇಷವೆಂದರ್ ನಾಲ್ವರು ಮಹಿಳೆಯರೇ ಸೇರಿ ಈ ಕ್ಲಬ್ ಹೌಸ್ ನಡೆಸುತ್ತಾರೆ. ಪುರುಷರಿಗೂ ಇದರಲ್ಲಿ ಚರ್ಚಿಸಲು ಮುಕ್ತ ಅವಕಾಶ ನೀಡಲಾಗುತ್ತದೆ.
ಮಲೆಯಾಳಿ ಭಾಷೆಯ ಮಹಿಳೆಯರ ಗುಂಪೊಂದು ಈಚೆಗೆ ಬೆಳಗಿನಜಾವ 2 ಗಂಟೆಗೆ ಸೆಕ್ಸ್ ಕುರಿತು ಕ್ಲಬ್ ಹೌಸ್ ನಲ್ಲಿ ಚರ್ಚೆ ನಡೆಸಿ ಭಾರಿ ಸುದ್ದಿ ಮಾಡಿದ್ದರು. ಆ ಚರ್ಚೆಯಲ್ಲಿ ಸುಮಾರು 4 ಸಾವಿರ ಜನರು ಪಾಲ್ಗೊಂಡಿದ್ದರು. ‘healthy sex life and women’s satisfaction’ ಎನ್ನುವುದು ಚರ್ಚೆಯ ವಿಷಯವಾಗಿತ್ತು. ಲೈಂಗಿಕತೆ, ಹಸ್ತಮೈಥುನ, ಮದುವೆ ಸೇರಿದಂತೆ ಹಲವಾರು ವಿಷಯಗಳನ್ನು ಇಲ್ಲಿ ಚರ್ಚಿಸಲಾಗಿತ್ತು.
ಓಪನ್ ಹೌಸ್ ಡಿಸ್ಕಶನ್ ಗಳಲ್ಲಿ ಸಹ ಸೆಕ್ಸ್ ಕುರಿತಾದ ತರ ತರದ ವಿಷಯಗಳನ್ನಿಡಲಾಗುತ್ತದೆ. ಅದರಲ್ಲಿ ಚರ್ಚಿಸುವುದಕ್ಕೆ ಆಡಿಯನ್ಸ್ ಗಳಿಗೆ ಮುಕ್ತ ಅವಕಾಶ ವನ್ನೂ ನೀಡಲಾಗುತ್ತದೆ. ವಿಶೇಷವೆಂದರೆ ಮಹಿಳೆಯರು, ಯುವತಿಯರೂ ಮುಕ್ತವಾಗಿ ಪುರುಷರೊಂದಿಗೆ ಇಲ್ಲಿ ಚರ್ಚಿಸುತ್ತಾರೆ.
ನೀವು ಯಾರೊಂದಿಗೆ ಸೆಕ್ಸ್ ಮಾಡಲು ಬಯಸುತ್ತೀರಿ? ನಿಮಗೆ ಯಾವ ರೀತಿಯ ಸೆಕ್ಸ್ ಇಷ್ಟ? ನೀವು ದಿನಕ್ಕೆ ಎಷ್ಟು ಬಾರಿ ಸೆಕ್ಸ್ ಮಾಡಲು ಬಯಸುತ್ತೀರಿ? ನೀವು ಎಷ್ಟು ಜನರೊಂದಿಗೆ ಸೆಕ್ಸ್ ಮಾಡಿದ್ದೀರಿ? ತೃಪ್ತಿ ಹೊಂದುವುದಕ್ಕೆ ಇರುವ ಬೇರೆ ಬೇರೆ ದಾರಿಗಳ್ಯಾವುವು? ಹೀಗೆ ನಾನಾ ತರದ ಚರ್ಚೆಗಳು ಅಲ್ಲಿ ನಡೆದಿರುತ್ತವೆ. ಸಾವಿರಾರು ಜನರು ಸೇರಿಕೊಡು ಈ ಮಾದರಿಯ ಚರ್ಚೆಯನ್ನು ಶುರುವಿಟ್ಟುಕೊಂಡಿರುತ್ತಾರೆ. ನಾವೇಕೆ ಸೆಕ್ಸ್ ಕುರಿತು ಮಾತನಾಡಬಾರದು, ನಾವು ಅಡಿಗೆಯ ವಿಷಯವನ್ನಷ್ಟೆ ಮಾತನಾಡಬೇಕೆ ಎಂದು ಮಾಡರೇಟರ್ ಯುವತಿಯರು ಪ್ರಶ್ನಿಸುತ್ತಾರೆ. ನಾವು ಕ್ಲಬ್ ಹೌಸ್ ನಲ್ಲಿ ಸೆಕ್ಸ್ ವಿಷಯ ಚರ್ಚಿಸಲು ಆರಂಭಿಸಿದ ನಂತರ ಸಾಕಷ್ಟು ಟೀಕೆಗಳು ಬಂದವು. ಆದರೆ ಅವುಗಳಿಗೆ ನಾವು ಬೆಲೆ ಕೊಟ್ಟಿಲ್ಲ. ನಮಗೂ ಮುಕ್ವಾಗಿ ಮಾತನಾಡಲು ಅವಕಾಶ ಬೇಕು ಎಂದು ಆ ಯುವತಿಯರು ಹರಳು ಹುರಿದಂತೆ ಪ್ರತಿಕ್ರಿಯುತ್ತಾರೆ.
ಹಾಗೆ ನೋಡಿದರೆ, ಇಂತಹ ಬೆರಳೆಣಿಕೆಯ ಕ್ಲಬ್ ಹೌಸ್ ಬಿಟ್ಟರೆ ಭಾರತದ ಕ್ಲಬ್ ಹೌಸ್ ಗಳು ಹೆಚ್ಚಾಗಿ ಸಾಮಾಜಿಕ, ಆಧ್ಯಾತ್ಮಿಕ, ರಾಜಕೀಯ, ಮನರಂಜನೆ ವಿಷಯಗಳಿಗೆ ಆದ್ಯತೆ ನೀಡುತ್ತಿವೆ. ಈ ಗಡಿಯನ್ನು ದಾಟಿಹೋದವುಗಳು ಅಪರೂಪ. ಎಲ್ಲಕ್ಕಿಂತ ಆಧ್ಯಾತ್ಮಿಕ ವಿಷಯಗಳಿಗೆ ಆಡಿಯನ್ಸ್ ಹೆಚ್ಚು ಸೇರುವುದನ್ನು ಕಾಣಬಹುದು.
ಕರ್ನಾಟಕದಲ್ಲಿ ಕ್ಲಬ್ ಹೌಸ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಜಾಲತಾಣವಾಗಿದೆ. ಪ್ರತಿ ದಿನ ಸಾವಿರಾರು ಜನರು ಹೊಸದಾಗಿ ಕ್ಲಬ್ ಹೌಸ್ ಮೆಂಬರ್ ಆಗುತ್ತಿದ್ದಾರೆ. ಹೊಸ ಹೊಸ ಕ್ಲಬ್ ಹೌಸ್ ಹುಟ್ಟುಹಾಕುತ್ತಿದ್ದಾರೆ. ಜಾತಿಗೊಂದು, ವಿಷಯಕ್ಕೊಂದು, ಪ್ರದೇಶಕ್ಕೊಂದು ಕ್ಲಬ್ ಹೌಸ್ ಗಳು ಆರಂಭವಾಗುತ್ತಿವೆ. ಕ್ಲಬ್ ಹೌಸ್ ಆಲಿಸುತ್ತಲೇ (ರೇಡಿಯೋ ಮಾದರಿಯಲ್ಲಿ) ನಾವು ಬೇರೆ ಕೆಲಸಗಳನ್ನು ಮುಂದುವರಿಸಬಹುದು ಎನ್ನುವ ಅದ್ಭುತ ಪ್ಲಸ್ ಪಾಯಿಂಟ್ ಇದರಲ್ಲಿದೆ.
ಕ್ಲಬ್ ಹೌಸ್ ಗಳ ಸಂಖ್ಯೆ ಹೆಚ್ಚುತ್ತಿರುವುದು ಸಧ್ಯಕ್ಕೆ ಒಳ್ಳೆಯ ಬೆಳವಣಿಗೆಯೆನಿಸಿದರೂ ಇದರ ನೆಗೆಟಿವ್ ಪಾಯಿಂಟ್ಸ್ ಗಳು ಏನು ಎನ್ನುವುದು ಇನ್ನೂ ಅಷ್ಟಾಗಿ ಗೊತ್ತಾಗಿಲ್ಲ. ಇದರಿಂದ ಸಮಾಜದಲ್ಲಿ ಯಾವೆಲ್ಲ ದುಷ್ಪರಿಣಾಮಗಳಾಗಲಿವೆ ಎನ್ನುವುದನ್ನು ಕಾದು ನೋಡಬೇಕಷ್ಟೆ.
ನಗ್ನ ವಿಡಿಯೋ ಮೂಲಕ ಬ್ಲ್ಯಾಕ್ ಮೇಲ್: ಬೆಳಗಾವಿಗರೇ ಹುಷಾರ್
ಪಾರುಲ್ ಯಾದವ್ ಗ್ಲಾಮರಸ್ ಲುಕ್ ಗೆ ಅಭಿಮಾನಿಗಳು ಫಿದಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ