Latest

480  ಕೋಟಿ ಬಂಡವಾಳ ಹೂಡಿಕೆಗೆ ಸಿಎಂ ಅನುಮೋದನೆ

480  ಕೋಟಿ ಬಂಡವಾಳ ಹೂಡಿಕೆಗೆ ಸಿಎಂ ಅನುಮೋದನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ  ಗುಡ್‍ರಿಚ್ ಏರೋಸ್ಪೇಸ್ ಸರ್ವೀಸ್ ಪೈವೇಟ್ ಲಿಮಿಟೆಡ್ ಸಂಸ್ಥೆಯು ರೂ. 480  ಕೋಟಿ ಬಂಡವಾಳ ಹೂಡಿಕೆ ಮಾಡಿ “Aircraft seats, Passenger restraint System, Aircraft Evacuation System” ತಯಾರಿಕಾ ಘಟಕ ಸ್ಥಾಪನೆ ಮಾಡಲು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ.
 ಗುಡ್‍ರಿಚ್ ಏರೋಸ್ಪೇಸ್ ಸರ್ವೀಸ್ ಪೈವೇಟ್ ಲಿಮಿಟೆಡ್ ಕಂಪನಿಯು ಅಮೇರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ವೈಮಾನಿಕ ವಲಯದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದಿದ್ದು ಭಾರತದಲ್ಲಿ ಸದರಿ ಕ್ಷೇತ್ರದ ವಿಸ್ತರಣೆಗೆ ಅನುವು ಮಾಡಿದೆ. ವಿಮಾನದ ಬಿಡಿ ಭಾಗಗಳು, ಇಂಜಿನಿಯರಂಗ್ ಸಾಫ್ಟವೇರ್ ಹಾಗೂ ಎಂಬೆಡೆಡ್ ಸಾಫ್ಟವೇರ್ ಅಭಿವೃದ್ಧಿ ಪಡಿಸುವುದು ಸಂಸ್ಥೆಯ ಮುಖ್ಯ ಚಟುವಟಿಕೆಗಳಾಗಿವೆ.
1996 ರಿಂದ ಸಂಸ್ಥೆಯು ಭಾರತದಲ್ಲಿ ವಿಮಾನ ತಯಾರಿಕೆಗೆ ಬೇಕಾದ ಬಿಡಿ ಭಾಗಗಳ ತಯಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದು, ಬೆಂಗಳೂರಿನ ವೈಟ್‍ಫಿಲ್ಡ್ ಪ್ರದೇಶದ 3 ಬೇರೆ ಬೇರೆ ಸ್ಥಳಗಳಲ್ಲಿ ಕೈಗಾರಿಕೆ ನಡೆಸುತ್ತಿರುತ್ತಾರೆ ಹಾಗೂ ಒಟ್ಟು 3000 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.
ಈಗ ಸಂಸ್ಥೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಸ್ಥಾಪಿಸಲಿರುವ ವಿಸ್ತರಣಾ ಘಟಕವು ಕರ್ನಾಟಕ ವನ್ನು ಜಾಗತಿಕ ಮಟ್ಟದ ವೈಮಾನಿಕ ಕ್ಷೇತ್ರದಲ್ಲಿ ಮೇಲ್ಮಟ್ಟಕ್ಕೆ ಕೊಂಡೊಯುವುದಲ್ಲದೆ ರಾಜ್ಯದಲ್ಲಿ ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರಗಳ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ದೇವನಹಳ್ಳಿಯಲ್ಲಿ ಸ್ಥಾಪಿಸಲಾಗುವ ವಿಸ್ತರಣಾ ಘಟಕವು ಸುಮಾರು 4000 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುತ್ತದೆ, ಅಲ್ಲದೆ ವೈಮಾನಿಕ ಉತ್ಪಾದನೆಯನ್ನು ಬಲಪಡಿಸಿರುವುದರ ಜೊತೆಗೆ ರಾಜ್ಯದ ಅಭಿವೃದ್ಧಿ ಮತ್ತು ಆರ್ಥಿಕ ವ್ಯವಸ್ಥೆಯ ಪ್ರಗತಿಗೆ ಪೂರಕವಾಗಲಿದೆ.
ಕರ್ನಾಟಕ ಸರ್ಕಾರವು ಈ ಯೋಜನೆಗೆ ಮೂಲಭೂತ ಸೌಕರ್ಯಗಳನ್ನು ಹಾಗೂ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡಲು ಒಪ್ಪಿದೆ.
1. ಏರೋಸ್ಪೇಸ್ ಎಸ್.ಇ.ಜಡ್ ಪಾರ್ಕ್ ನ ಪ್ಲಾಟ್ ನಂ.132 ರಿಂದ 167 ರಲ್ಲಿ 25 ಎಕರೆ 1 ಗುಂಟೆ ಜಮೀನು ಹಂಚಿಕೆ.
2. ಬೆಸ್ಕಾಂನಿಂದ 400 ಕೆವಿಎ ವಿದ್ಯುತ್ ಸರಬರಾಜು.
3. ಕೆಐಎಡಿಬಿ ವತಿಯಿಂದ ಪ್ರತಿ ದಿನ 3 ಲಕ್ಷ ಲೀಟರ್ ನೀರು.
4. ಸರ್ಕಾರದ ಏರೋಸ್ಪೇಸ್ ನೀತಿಯಂತೆ ಪ್ರೋತ್ಸಾಹ ಮತ್ತು ರಿಯಾಯಿತಿಗಳು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button