ಪ್ರಗತಿವಾಹಿನಿ ಸಿದ್ದಿ; ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿಬಂದಂತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಬುಲಾವ್ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ಸಮ್ಮತಿ ನೀಡಿದರೆ ಫೆಬ್ರವರಿ 2ಕ್ಕೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ.
9+3 ಫಾರ್ಮುಲಾದಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹೊಸದಾಗಿ ಗೆದ್ದ ಶಾಸಕರ ಜೊತೆಗೆ ಮೂಲ ಬಿಜೆಪಿಗರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿವೆ. 3-4 ಸ್ಥಾನಗಳನ್ನು ಅಂದಾಜಿಸಲಾಗಿದೆ
ಸಚಿವ ಸ್ಥಾನ ಸಿಗುವ ನೂತನ ಶಾಸಕರು:
* ರಮೇಶ್ ಜಾರಕಿಹೊಳಿ, ಗೋಕಾಕ್
* ಬಿ.ಸಿ. ಪಾಟೀಲ್, ಹಿರೇಕೆರೂರು
* ಎಸ್.ಟಿ. ಸೋಮಶೇಖರ್, ಯಶವಂತಪುರ
* ಬೈರತಿ ಬಸವರಾಜ್, ಕೆ.ಆರ್.ಪುರಂ
* ಗೋಪಾಲಯ್ಯ, ಯಶವಂತಪುರ
* ಸುಧಾಕರ್, ಚಿಕ್ಕಬಳ್ಳಾಪುರ
* ಆನಂದ್ ಸಿಂಗ್, ವಿಜಯನಗರ
* ಶಿವರಾಂ ಹೆಬ್ಬಾರ್, ಯಲ್ಲಾಪುರ
* ನಾರಾಯಣಗೌಡ, ಕೆ.ಆರ್. ಪೇಟೆ
* ಮಹೇಶ್‍ಕುಮಟಳ್ಳಿ, ಅಥಣಿ
ಸಚಿವ ಸ್ಥಾನ ಅನುಮಾನ:
* ಶ್ರೀಮಂತಪಾಟೀಲ್, ಕಾಗವಾಡ
ಮೂಲ ಬಿಜೆಪಿಗರು:
* ಉಮೇಶ್ ಕತ್ತಿ, ಹುಕ್ಕೇರಿ ಶಾಸಕ
* ಅರವಿಂದ ಲಿಂಬಾವಳಿ, ಮಹದೇವಪುರ
* ಸುನೀಲ್‍ಕುಮಾರ್, ಕಾರ್ಕಳ
* ಹಾಲಪ್ಪ ಆಚಾರ್, ಯಲಬುರ್ಗಾ
* ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ
* ಅಂಗಾರ, ಸುಳ್ಯ ಇವರಿಗೂ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ