Latest

ನಾಯಕತ್ವ ಬದಲಾವಣೆ; ಅಚ್ಚರಿ ಹೇಳಿಕೆ ನೀಡಿದ ಆರ್.ಅಶೋಕ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಆರ್ಭಟದ ನಡುವೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಭಾರಿ ಚರ್ಚೆಗೆ ಬಂದಿದ್ದು, ಇದೀಗ ಕಂದಾಯ ಸಚಿವ ಆರ್.ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ಶೇ.100ರಷ್ಟು ನಾಯಕತ್ವ ಬದಲಾವಣೆ ಚಟುವಟಿಕೆಗಳು ನಡೆಯುತ್ತಿರುವುದು ನಿಜ. ಕೆಲ ಸಚಿವರು, ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದರೆ, ಇನ್ನು ಕೆಲವರು ಪ್ರತ್ಯೇಕ ಸಭೆಗಳನ್ನು ನಡೆಸಿ ಚರ್ಚಿಸುತ್ತಿದ್ದಾರೆ. ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಆದರೆ ಪ್ರಸ್ತುತ ನನ್ನ ಆದ್ಯತೆ ಕೊರೊನಾ ನಿಯಂತ್ರಣ ಹೊರತು ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಚರ್ಚಿಸುವುದಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆ ಪ್ರಯತ್ನಗಳು ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವುದು ನಿಜ ಎಂಬುದನ್ನು ಸ್ವತ; ಕಂದಾಯ ಸಚಿವರೇ ಒಪ್ಪಿಕೊಂಡಿದ್ದು, ಆರ್.ಅಶೋಕ್ ಹೇಳಿಕೆ ಸಾಕಷ್ಟು ಅಚ್ಚರಿಗೂ ಕಾಣವಾಗಿದೆ.

ನಾಯಕತ್ವ ಬದಲಾವಣೆ ಮಾತು; ಆಪ್ತ ಸಚಿವರ ಬಳಿ ಸಿಎಂ ಬೇಸರ
ಖಾನಾಪುರ ತಾಲೂಕು ಆಸ್ಪತ್ರೆಗೆ 30 ಆಕ್ಸಿಜನ್ ಕಾನ್ಸಂಟ್ರೇಟರ್ ಹಸ್ತಾಂತರ

Home add -Advt

Related Articles

Back to top button