Latest

ಸಿಎಂ ಬಿಎಸ್ ವೈ ಭೋಜನಕೂಟ ದಿಢೀರ್ ಮುಂದೂಡಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಗದಿ ಪಡಿಸಿದ್ದ ಭೋಜನಕೂಟ ಕಾರ್ಯಕ್ರಮ ಮುಂದೂಡಲಾಗಿದೆ.

ಜುಲೈ 26ರಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಹಿನ್ನೆಲೆಯಲ್ಲಿ ಜುಲೈ 25ರಂದು ರಾತ್ರಿ ಸಿಎಂ ಯಡಿಯೂರಪ್ಪ ಭೋಜನಕೂಟ ಆಯೋಜಿಸಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಭೋಜನಕೂಟದಲ್ಲಿ ಭಾಗಿಯಾಗಲು ಕಷ್ಟಸಾಧ್ಯವಾಗಿದ್ದರಿಂದ ಭೋಜನಕೂಟ ಮುಂದೂಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಜುಲೈ 25ರಂದು ಭೋಜನಕೂಟದಲ್ಲಿ ಭಾಗಿಯಾಗಿ ರಾತ್ರಿ ತಮ್ಮ ಜಿಲ್ಲೆಗಳಿಗೆ ವಾಪಸ್ ಆಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಭೋಜನಕೂಟ ಮುಂದೂಡಲಾಗಿದೆ ಎನ್ನಲಾಗಿದೆ. ಜುಲೈ 27 ಅಥವಾ ಮತ್ತೊಂದು ದಿನ ಭೋಜನಕೂಟ ಏರ್ಪಡಿಸುವ ಸಾಧ್ಯತೆ ಇದೆ. ಈ ಮೊದಲು ಜುಲೈ 25ರಂದೇ ಶಾಸಕಾಂಗ ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಸಭೆ ಬಳಿಕ ಭೋಜನಕೂಟ ಆಯೋಜಿಸಲಾಗಿತ್ತು. ಆದರೀಗ ಶಾಸಕಾಂಗ ಸಭೆಯನ್ನು ರದ್ದುಗೊಳಿಸಲಾಗಿದ್ದು, ಇದೀಗ ಭೋಜನಕೂಟ ಕಾರ್ಯಕ್ರಮವನು ಕೂಡ ಮುಂದೂಡಲಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಯಡಿಯೂರಪ್ಪಗೆ ಮತ್ತೆ ದೆಹಲಿಗೆ ಬುಲಾವ್: ಜು.25ರಂದು ಕೇವಲ ಭೋಜನಕೂಟ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button