ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಸರ್ಕಾರಿ ನೌಕರರಿಗೆ ಇನ್ಮುಂದೆ ಐಟಿ-ಬಿಟಿ ಉದ್ಯೋಗಿಗಳ ರೀತಿ ಕೆಲಸ ನೀಡಲಾಗುತ್ತದೆ. ವಾರಕ್ಕೆ ಬರೀ 5 ದಿನ ಮಾತ್ರ ಕೆಲಸ ಇರುತ್ತದೆ. ಸರ್ಕಾರಿ ನೌಕರರಿಗೆ ಶನಿವಾರ, ಭಾನುವಾರ ರಜೆ ಎರಡು ದಿನ ರಜೆ ಇರಲಿದೆ. ಜುಲೈ 10ರಿಂದ ತಿಂಗಳ ನಾಲ್ಕೂ ಶನಿವಾರಗಳೂ ಸರ್ಕಾರಿ ರಜೆ ಸಿಗಲಿದೆ.
ಸರ್ಕಾರಿ ನೌಕರರು ಆಯಾ ಏರಿಯಾಗಳಿಗೆ ಅನುಗುಣವಾಗಿ ಒಂದು ದಿನ ಬಿಟ್ಟು ಒಂದು ದಿನ ಕೆಲಸ ಮಾಡಬೇಕು. ಈ ನಿರ್ಧಾರವನ್ನು ಆಯಾ ಸ್ಥಳೀಯ ಕಚೇರಿಗಳ ಮುಖ್ಯಸ್ಥರೇ ತೆಗೆದುಕೊಳ್ಳಬಹುದು. ವಾರದ 5 ದಿನಗಳು ಕಚೇರಿ ಇರಬೇಕು. ಆದರೆ ನೌಕರರಿಗೆ ಒಂದು ದಿನ ಬಿಟ್ಟು ಒಂದು ದಿನ ಕೆಲಸ ನೀಡಬೇಕು.
ವಿಶೇಷ ಸೂಚನೆ ನೀಡಿರುವ ರಾಜ್ಯ ಸರ್ಕಾರವು, ವಾರಕ್ಕೆ 2 ದಿನ ರಜೆ ಎಲ್ಲ ಸರ್ಕಾರಿ ಕಚೇರಿಗಳಿಗೆ ಅನ್ವಯವಾಗಲ್ಲ. ಸೋಂಕು ಹೆಚ್ಚಾದ ಪ್ರದೇಶಗಳಲ್ಲಿ ಆಯಾ ಸ್ಥಳೀಯ ಮುಖ್ಯಸ್ಥರು ಕ್ರಮ ಕೈಗೊಳ್ಳಬಹುದು. ದಿನಕ್ಕೆ ಶೇ.50ರಷ್ಟು ನೌಕರರು ಮಾತ್ರ ಕಾರ್ಯ ನಿರ್ವಹಿಸಬೇಕು. ಇವತ್ತು ಬಂದವರು, ನಾಳೆ ಬರುವಂತಿಲ್ಲ. ಒಂದು ದಿನ ಗ್ಯಾಪ್ ಮಾದರಿಯಲ್ಲಿ ಕೆಲಸ ನಿರ್ಹಹಿಸಬೇಕು ಎಂದು ತಿಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ