ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಇರುವ 21 ದಿನಗಳ ಲಾಕ್ ಡೌನ್ ಅವಧಿಯನ್ನು ಇನ್ನಷ್ಟು ದಿನಗಳ ಕಾಲ ಅಂದರೆ ಏ.30 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗುವುದು ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಲಾಕ್ ಡೌನ್ ಸಡಿಲಿಸಬಾರದು. ಲಾಕ್ ಡೌನ್ ಮುಂದುವರೆಸಬೇಕು ಎಂದು ಸಲಹೆಗಳು ಬಂದಿದ್ದು, ಏ.30ರವರೆಗೆ ಲಾಕ್ ಡೌನ್ ಮುಂದುವರೆಸುವುದು ಅನಿವಾರ್ಯವಾಗಿದೆ. ಮುಂದಿನ 2-3 ವಾರಗಳು ದೇಶಕ್ಕೆ ಕಠಿಣ ಪರಿಸ್ಥಿತಿ ಇರುವುದರಿಂದ ಮುಂದಿನ ಏ.14ರ ಬಳಿಕ ವಿಸ್ತಾರಗೊಳ್ಳುವ ಲಾಕ್ ಡೌನ್ ವಿಭಿನ್ನವಾಗಿರಲಿದೆ. ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೆ ತರುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದರು.
ಕೊರೊನಾ ಭೀತಿ ಹಿನ್ನಲೆಯಲ್ಲಿ ನಗರಗಳಲ್ಲಿನ ಕಾರ್ಮಿಕರನ್ನು ಹಳ್ಳಿಗರು ಸ್ವೀಕರಿಸದ ಕಾರಣ ನಗರಗಳಲ್ಲೇ ಅವರನ್ನು ಇರಿಸಿಕೊಲ್ಳಲು ವ್ಯವಸ್ಥೆ ಮಾಡಬೇಕು ಎಂದು ಪ್ರಧಾನಿ ತಿಳಿಸಿದ್ದಾರೆ. ಮೇ 31 ರವರೆಗೆ 1 ಲಕ್ಷ ಜನರ ಆರೋಗ್ಯ ತಪಾಸಣೆ ನಡೆಸಲು ಸೂಚಿಸಲಾಗಿದೆ.
2.84 ಲಕ್ಷ ಪಿಪಿಇ ಕಿಟ್ ಗಳನ್ನು ಪೂರೈಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಿಟ್ ಗಳನ್ನು ಪೂರೈಸಲಾಗುವುದು. ಲ್ಯಾಬ್ ಗಳ ಸಂಖ್ಯೆ 220ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಬೆಳಿಗ್ಗೆಯಿಂದ ಈವರೆಗೆ 7 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 214ಕಕ್ಕೆ ಏರಿಕೆಯಾಗಿದೆ. ತಬ್ಲಿಕ್ ಜಮಾತ್ ನ 50 ಜನರನ್ನು ಗುರುತಿಸಲಾಗಿದೆ. ವೈದ್ಯಕೀಯ ಸಿಬ್ಬಂದಿಗಳ ಜತೆ ಅನುಚಿತ ವರ್ತನೆ ಸಹಿಸಲ್ಲ ಎಂದು ಎಚ್ಚರಿಸಿದರು.
ಲಾಕ್ ಡೌನ್ ನಿಂದಾಗಿ ಅರ್ಥ ವ್ಯವಸ್ಥೆ ಸಂಪೂರ್ಣ ಕುಸಿದಿರುವ ಹಿನ್ನಲೆಯಲ್ಲಿ ಆಅರ್ಥಿಕತೆಗೆ ಕೊಂಚ ಚೇತರಿಕೆ ತರುವ ನಿಟ್ಟಿನಲ್ಲಿ ಭಾಗಶ: ಸರ್ಕಾರಿ ಕಚೇರಿಗಳನ್ನು ನಡೆಸಲು ಅನುಮತಿ ನೀಡಾಲಾಗುವುದು. ಏ.10ರಿಂದ ಮೀನುಗಾರಿಕೆಗೆ ಅನುಮತಿ ನೀಡಲಾಗುತ್ತದೆ. ಇದರಿಂದ ಕರಾವಳಿ ಭಾಗದ ಜನರ ಆರ್ಥಿಕ ಸಂಕಷ್ಟ ಕೊಂಚ ಸುಧಾರಿಸಲಿದೆ. ಕೈಗಾರಿಕೆ, ವ್ಯಾಪಾರ ವಹಿವಾಟುಗಳ ಬಗ್ಗೆ ಇನ್ನು ಎರಡುದಿನಗಳಲ್ಲಿ ರೂಪುರೇಷೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ