Latest

ಸ್ಟಾರ್ ಹೋಟೆಲ್ ಗಳಲ್ಲಿ ತಾತ್ಕಾಲಿಕ ಆಸ್ಪತ್ರೆ; 5000 ಬೆಡ್ ವ್ಯವಸ್ಥೆ; ಅನಗತ್ಯ ಗುಂಪು ಸೇರಿದರೆ ಕ್ರಮ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ವಾರ್ಡ್ ಗೆ ಒಂದರಂತೆ ಆಂಬುಲೆನ್ಸ್, 5000 ಬೆಡ್ ಗಳ ವ್ಯವಸ್ಥೆ, 49 ಶ್ರದ್ಧಾಂಜಲಿ ವಾಹನಗಳ ಉಚಿತ ಸೇವೆ, 24 ಗಂಟೆಗಳ ಕಾಲ ಅಧಿಕಾರಿಗಳ ನೇಮಕ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೊರೊನಾ 2ನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದ್ದು, ಸಭೆ ಯಲ್ಲಿ ಕೈಗೊಳ್ಳಲಾದ ನಿರ್ಧಾರಗಳ ಬಗ್ಗೆ ವಿವರಿಸಿದರು.

* ಸ್ಟಾರ್ ಹೋಟೆಲ್ ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಡಿಮೆ ರೋಗ ಲಕ್ಷಣಗಳುಳ್ಳ ರೋಗಿಗಳಿಗೆ ನೋಡಿಕೊಳ್ಳಲು ತಾತ್ಕಾಲಿಕ ಆಸ್ಪತ್ರೆಗಳನ್ನು ಆರಂಭಿಸಲು ಕ್ರಮ
* ಅನಗತ್ಯ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. 100ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.
* ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಸೂಚನೆ
* ಹೆಚ್ಚು ರೋಗ ಲಕ್ಷಣಗಳಿರುವ ರೋಗಿಗಳನ್ನು ಮಾತ್ರ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ
* ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರದಿಂದ ದಾಖಲಿಸುವ ರೋಗಿಗಳಿಗೆ ಕಾಯ್ದಿರಿಸಲು ಕ್ರಮ
* ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲು
* ಸರ್ಕಾರಿ ಆಸ್ಪತ್ರೆಗಳಲ್ಲಿ 1000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸಲು ನಿರ್ಧಾರ
* ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 5,000 ಹಾಸಿಗೆ ಕೋವಿಡ್ ರೋಗಿಗಳಿಗೆ
* ಫ್ರಂಟ್ಲೈನ್ ವರ್ಕರ್ಗಳಾದ ವೈದ್ಯರು, ನರ್ಸ್ ಗಳ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕ
* ಹೋಮ್ ಐಸೋಲೇಷನ್ ಇರುವ ರೋಗಿಗಳಿಗೆ ಮುದ್ರೆ ಹಾಕಲು ಕ್ರಮ
* ರಾಜ್ಯಾದ್ಯಂತ ಕಾಟ್ಯಾಂಕ್ಟ್ ಟ್ರೇಸಿಂಗ್ ಗಳನ್ನು ತ್ವರಿತಗೊಳಿಸುವುದು
* ಪ್ರತಿದಿನ ನಡೆಸುವ ಕೋವಿಡ್ ಟೆಸ್ಟ್ ರಿಪೋರ್ಟ್ 24 ಗಂಟೆಯೋಳಗಾಗಿ ಲಭ್ಯವಾಗುವಂತೆ ಕ್ರಮ
* ಕಂಟೈನ್ಮೆಂಟ್ ಝೋನ್ ಮತ್ತು ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳ ಕಟ್ಟುನಿಟ್ಟು ಜಾರಿ
* ಉಚಿತವಾಗಿ 108 ಸೇರಿದಂತೆ ಅಗತ್ಯ ಆಂಬುಲೆನ್ಸ್ ಗಳು ರಾಜ್ಯದ ಎಲ್ಲಾ ಜಿಲ್ಲಾ ಕೆಂದ್ರಗಳಲ್ಲೂ ಲಭ್ಯವಿರುವಂತೆ ಕ್ರಮ
* 49 ಶ್ರದ್ಧಾಂಜಲಿ ಆಂಬ್ಯೂಲೆನ್ಸ್ ಉಚಿತ ಸೇವೆ
* ಚಿತಾಗಾರಗಳಲ್ಲಿ ಕೋವಿಡ್ನಿಂದಾಗಿ ಮೃತಪಟ್ಟ ಶವಗಳ ಅಂತ್ಯಕ್ರಿಯೆ ಉಚಿತವಾಗಿ ನೆರವೇರಿಸಲು ಕ್ರಮ
* 5,000 ಆಕ್ಸಿಜನ್ ಸಿಲಿಂಡರ್ಗಳ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ
* ಆಕ್ಸಿಜನ್ ಸಿಲಿಂಡರ್ಗಳ ಬದಲಾವಣೆ ತಪ್ಪಿಸಲು ಜಂಬೋ ಸಿಲಿಂಡರ್ಗಳನ್ನು ಖರೀದಿಸಲು ಕ್ರಮ

ಮಿತಿಮೀರಿದ ಕೊರೊನಾ; ಟಫ್ ರೂಲ್ಸ್ ಬಗ್ಗೆ ಸಿಎಂ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button