ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಸಿಎಂ ಯಡಿಯೂರಪ್ಪ ರಾಜೀನಾಮೆ ಸೂಳಿವು ನೀಡಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಂಸದ ಬಿ.ವೈ.ರಾಘವೇಂದ್ರ ಹೈಕಮಾಂಡ್ ಆದೇಶಕ್ಕೆ ಬದ್ಧನಾಗಿರುವುದಾಗಿ ಸಿಎಂ ಹೇಳಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯೂ ಸಿಎಂ ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದರು ಇದನ್ನೇ ಈಗಲು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾಘವೇಂದ್ರ, ಸಿಎಂ ಯಡಿಯೂರಪ್ಪ ಹೇಳಿಕೆ ನನಗೆ ವಿಶೇಷ ಎಂದು ಅನಿಸುತ್ತಿಲ್ಲ. ಯಡಿಯೂರಪ್ಪ ಒಂದೇ ಮಾತಿನಲ್ಲಿ ಹೇಳಿದ್ದಾರೆ ಪಕ್ಷ ಯಾವತ್ತು ಸೂಚಿಸುತ್ತೆ ಅಂದು ಹಿಂದೆ ಸರಿಯಲು ಸಿದ್ಧ ಎಂದು. ನಮ್ಮ ಕುಟುಂಬದಿಂದ ಕೇಂದ್ರ ಸರ್ಕಾರಕ್ಕೆ ಯಾವುದೇ ಬೇಡಿಕೆ ಇಟ್ಟಿಲ್ಲ. ಕೇಂದ್ರ ನೀಡಿದ ಜವಾಬ್ದಾರಿಯನ್ನು ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸಿದ್ದಾರೆ. ಮಠಾಧೀಶರ ಬೆಂಬಲ, ಕಾರಕರ್ತರ ಬೆಂಬಲ ಇದೆಲ್ಲದರ ಹೊರತಾಗಿ ಹೈಕಮಾಂಡ್ ನಿರ್ಧಾರ ಅಂತಿಮವಾಗಿರುತ್ತದೆ. ಪಕ್ಷ ನಮಗೆ ಎಲ್ಲವನ್ನೂ ಕೊಟ್ಟಿದೆ. ತಂದೆ ಯಡಿಯೂರಪ್ಪನವರಿಗೆ ಸಿಎಂ ಹುದ್ದೆ, ನನಗೆ ಸಂಸದ ಸ್ಥಾನ, ವಿಜಯೇಂದ್ರಗೆ ಉಪಾಧ್ಯಕ್ಷ ಸ್ಥಾನ…ಇದಕ್ಕಿಂತ ಹೆಚ್ಚು ಬೇರೇನು ಬೇಕು? ಹೀಗಾಗಿ ಪಕ್ಷದ ಸೂಚನೆಗೆ ನಾವು ಬದ್ಧರಾಗಿರಬೇಕಾಗುತ್ತದೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಹಲವು ಸವಾಲುಗಳು ಎದುರಾದವು. ಪ್ರವಾಹ, ಕೋವಿಡ್, ಆರ್ಥಿಕ ಸಂಕಷ್ಟ, ರಾಜಕೀಯ ಸವಾಲುಗಳು ಹೀಗೆ ಎಲ್ಲಾ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ವಿರೋಧ ಪಕ್ಷದಲ್ಲಿದ್ದಾಗಲು, ಆಡಳಿತ ಪಕ್ಷದಲ್ಲಿದ್ದಾಗಲೂ ಕೂಡ ಹೋರಾಟದ ಮಾಡಿಕೊಂಡೆ ಪಕ್ಷವನ್ನು ಎಲ್ಲರನ್ನು ಮುಂದೆ ತೆಗೆದುಕೊಂಡು ಹೇಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಎಲ್ಲವನ್ನೂ ಯಡಿಯೂರಪ್ಪ ಸಮರ್ಥವಾಗಿ ಎದುರಿಸಿದ್ದಾರೆ ಎಂದು ಹೇಳಿದರು.
ಸಿಎಂ ಬಿಎಸ್ ವೈಗೆ ಮಠಾಧೀಶರ ಬೆಂಬಲ; ನನ್ನದು ತಟಸ್ಥ ನಿಲುವು ಎಂದ ಪಂಚಮಸಾಲಿ ಪೀಠದ ಜಗದ್ಗುರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ