ಸಿಎಂ ಯಡಿಯೂರಪ್ಪ ವಿರುದ್ಧ ಪತ್ರ ಬರೆದಿದ್ದು ಯಾರು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಲ ದಿನಗಳಿಂದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ವಿರುದ್ಧವಾಗಿ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಯಡಿಯೂರಪ್ಪ ಪರವಾಗಿ ಬರೆದಿರುವ ಪತ್ರವೂ ವೈರಲ್ ಆಗಿತ್ತು.

ಈ ಪತ್ರ ವ್ಯವಹಾರದ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ನಡೆದಿದೆ. ಈ ನಡುವೆ ಯಡಿಯೂರಪ್ಪನವರ ಮಾಜಿ ಆಪ್ತ ಕಾರ್ಯದರ್ಶಿ ಎನ್‌.ಆರ್‌ ಸಂತೋಷ್‌ ಬರೆದಿದ್ದಾರೆ ಎನ್ನಲಾಗಿರುವ ಪತ್ರವೊಂದು ಭಾರಿ ವೈರಲ್ ಆಗಿದೆ.

ಬಿಎಸ್‌ವೈ ವಿರುದ್ಧವಾಗಿ ಕೆಲವು ಅಸಮಾಧಾನಿತ ಶಾಸಕರು ಹೈಕಮಾಂಡ್‌ಗೆ ದೂರು ನೀಡಲು ಮುಂದಾಗಿದ್ದಾರೆ ಎಂಬ ಸಂಗತಿಯೂ ಚರ್ಚೆಯಲ್ಲಿದೆ.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಸೇರಿದಂತೆ ಯಡಿಯೂರಪ್ಪ ಬಣದ ಕೆಲವರ ನಡೆಗಳಿಂದ ಅಸಮಾಧಾನಿತಗೊಂಡಿರುವ ಶಾಸಕರು ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಗುಂಪಿನಲ್ಲಿ ಎನ್‌.ಆರ್‌ ಸಂತೋಷ್‌ ಕೂಡಾ ಕಾಣಿಸಿಕೊಂಡಿದ್ದರು. ಬಿಎಸ್‌ವೈ ವಿರುದ್ಧ ವರಿಷ್ಠರಿಗೆ ಪತ್ರ ಬರೆದಿದ್ದು ಎನ್‌.ಆರ್‌ ಸಂತೋಷ್‌ ಎಂಬ ಆರೋಪವೂ ಪಕ್ಷದ ವಲಯದಲ್ಲಿ ಕೇಳಿಬಂದಿತ್ತು.

Home add -Advt

ಈ ಹಿನ್ನಲೆಯಲ್ಲಿ ನಾನು ಯಾವುದೇ ಪತ್ರವನ್ನು ಬರೆದಿಲ್ಲ ಹಾಗೂ ಬಿಎಸ್‌ವೈ ವಿರುದ್ಧ ದೂರು ಹೇಳಲು ದೆಹಲಿಗೂ ಹೋಗಿಲ್ಲ ಎಂದು ಎನ್.ಆರ್ ಸಾಂತೋಷ್ ಸ್ಪಷ್ಟಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button