ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಔಷಧ ತಯಾರಿಕಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪಾದನೆಯನ್ನು ಹೆಚ್ಚಿಸಲು ಕರ್ನಾಟಕ ಹಾಗೂ ಅಮೆರಿಕಾದ ಸರ್ಕಾರಗಳ ನಡುವೆ ಸಹಕಾರ ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿಯಾದ ಶ್ವೇತ ಭವನದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ ಕಚೇರಿಯ ನಿರ್ದೇಶಕ ರಾಹುಲ್ ಗುಪ್ತಾ ನೇತೃತ್ವದ ನಿಯೋಗದೊಂದಿಗೆ ಈ ವಿಷಯದ ಕುರಿತು ಚರ್ಚಿಸಿದರು.
ರಾಹುಲ್ ಗುಪ್ತಾ ಅವರು ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಕಚೇರಿಯಿಂದ ಅಮೆರಿಕಾ-ಭಾರತದ ನಡುವೆ ಔಷಧ ನೀತಿ ನಿರೂಪಣೆ, ಔಷಧ ಉತ್ಪಾದನೆ, ನಾರ್ಕೋಟಿಕ್ಸ್ ಡ್ರಗ್ ನಿಯಂತ್ರಣ ಮೊದಲಾದ ವಿಷಯಗಳ ಕುರಿತು ಪರಸ್ಪರ ಸಹಕಾರ ಪಡೆಯುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳನ್ನು ವಿವರಿಸಿದರು. ರಾಜ್ಯದೊಂದಿಗಿನ ಸಹಕಾರ ವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರಾಜ್ಯದಲ್ಲಿ ಔಷಧ ತಯಾರಿಕಾ ವಲಯದಲ್ಲಿ ಅಮೆರಿಕಾದ ಕಂಪೆನಿಗಳು ಹೂಡಿಕೆ ಮಾಡಲು ಮುಖ್ಯಮಂತ್ರಿಯವರ ಸಹಕಾರ ಕೋರಿದರು.
ಕರ್ನಾಟಕದಲ್ಲಿ ಅಮೆರಿಕಾದ ಕಂಪೆನಿಗಳು ಔಷಧ ಮತ್ತು ಲಸಿಕೆ ತಯಾರಿಕೆಯಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದನ್ನು ಸ್ವಾಗತಿಸಿದ ಮುಖ್ಯಮಂತ್ರಿಯವರು ಕರ್ನಾಟಕ ಈಗಾಗಲೇ ಔಷಧ ವಲಯದ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಗ್ಲೋಬಲ್ ಇಂಡಿಯನ್ ಟ್ರೇಡ್ ಅಂಡ್ ಕಲ್ಚರಲ್ ಕೌನ್ಸಿಲ್ ನ ಅಧ್ಯಕ್ಷ ಹರಿಂದರ್ ಎಸ್. ಪನೇಸರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಜಯರಾಂ ರಾಯಪುರ ಮೊದಲಾದವರು ಉಪಸ್ಥಿತರಿದ್ದರು.
ಯಾವ ಕಾರಣಕ್ಕೆ ನಿಮಗೆ ಮತ್ತೆ ಅವಕಾಶಕೊಡಬೇಕು; ಸಿದ್ದರಮಯ್ಯ ವಿರುದ್ಧ ಸಿಎಂ ವಾಗ್ದಾಳಿ
https://pragati.taskdun.com/cm-basavaraj-bommaiattacksiddaramaiah/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ