Latest

ಮುಖ್ಯಮಂತ್ರಿಗಳ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸದ ಬಳಿ ಬಂದ ವೃದ್ಧರೊಬ್ಬರು ತನಗೆ ಪೊಲೀಸರಿಂದ ಅನ್ಯಾಯವಾಗಿದೆ ನ್ಯಾಯಕೊಡಿಸಿ ಎಂದು ಕಣ್ಣೀರುಡುತ್ತಾ, ವಿಷ ಸೇವುಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಸಿಎಂ ಬೊಮ್ಮಾಯಿ ಅವರ ಬೆಂಗಳೂರಿನ ಆರ್.ಟಿ.ನಗರ ನಿವಾಸದ ಬಳಿ ಬಂದ ವೃದ್ಧ, ಸೈಟ್ ವಿಚಾರವಾಗಿ ನನಗೆ ಪೊಲೀಸರಿಂದ ಅನ್ಯಾಯವಾಗಿದೆ. ಕೆಲವರ ಜತೆ ಸೇರಿ ಪೊಲಿಸರೇ ಮೋಸ ಮಾಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಇನ್ಸ್ ಪೆಕ್ಟರ್ ನನಗೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸುವಂತೆ ಈ ಹಿಂದೆ ಕೂಡ ನಾನು ದೂರು ನೀಡಿದ್ದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡ ವೃದ್ಧ, ತನ್ನ ಬಳಿ ಇದ್ದ ದ್ರಾವಣದ ಬಾಟಲ್ ತೆಗೆದುಕೊಂಡು ಇದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ದ್ರಾವಣ ಸೇವಿಸಲು ಮುಂದಾಗಿದ್ದಾರೆ. ತಕ್ಷಣ ತಡೆದ ಪೊಲೀಸರು ವೃದ್ಧರನ್ನು ಪಕ್ಕಕ್ಕೆ ಕರೆದು ಸಮಸ್ಯೆ ಏನಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ವೃದ್ಧರನ್ನು ಸಮಾಧಾನ ಪಡಿಸಿದ್ದಾರೆ.

ಸೈಕಲ್ ನಿಂದ ಬಿದ್ದು ವಿದ್ಯಾರ್ಥಿ ಸಾವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button