Latest

ಶಾಲೆಗಳಿಗೆ ರಜೆ; ಸಂಜೆಯೇ ನಿರ್ಧಾರ – ಸಿಎಂ ಬೊಮ್ಮಾಯಿ

 

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪಿಗಾಗಿ ಕಾಯೋಣ, ತೀರ್ಪನ್ನು ಎಲ್ಲರೂ ಗೌರವಿಸೋಣ. ಯಾರೂ ಕೂಡ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

Home add -Advt

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹೊರಗಡೆಯವರು ಪ್ರಚೋದನೆ ನೀಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಹೇಳಿಕೆ, ಪ್ರತಿಕ್ರಿಯೆಗಳ ಕೊಡಲಾಗಿದೆ. ಹಿಜಾಬ್, ಕೇಸರಿ ಶಾಲು ವಿಚಾರವಗಿ ಯಾರೂ ಕೂಡ ಅನಗತ್ಯವಾಗಿ ಪ್ರತಿಕ್ರಿಯೆಗಳನ್ನು ಕೊಡಬೇಡಿ. ಮೊದಲು ಹೇಳಿಕೆಗಳನ್ನು ನೀಡುವುದನ್ನು ಬಿಡಿ ಎಂದು ಹೇಳಿದರು.

ಮಕ್ಕಳ ವಿಚಾರದಲ್ಲಿ ಸಂವೇದನಾಶೀಲರಾಗಿರಬೇಕು. ಅನಗತ್ಯ ಗೊಂದಲ, ಪ್ರಚೋದನೆ ನೀಡುವ ಕೆಲಸ ಮಾಡಬಾರದು. ಮೊದಲಿನಂತೆ ಸೌಹಾರ್ದತೆ, ಶಿಸ್ತು ಮೂಡಿಸಲು ಕ್ರಮ ಕೈಗೊಳ್ಳಬೇಕಿದೆ. ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಎಲ್ಲರೂ ಕೋರ್ಟ್ ತೀರ್ಪಿಗಾಗಿ ಕಾಯೋಣ ಎಂದರು.

ಇನ್ನು ರಜೆ ಮುಂದುವರೆಸುವ ಬಗ್ಗೆ ಸಂಜೆ ಶಿಕ್ಷಣ ಸಚಿವರು, ಗೃಹ ಸಚಿವರು, ಅಧಿಕಾರಿಗಳ ಜತೆ ಸಭೆ ನಡೆಯಲಿದೆ. ಸಭೆಯಲ್ಲಿ ರಜೆ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ರಾಜ್ಯಪಾಲರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

Related Articles

Back to top button