ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಲೋಕಸಭಾ ಚುನಾವಣೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಒಟ್ಟು 42 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದು, ಒಟ್ಟಾರೆ 76 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕೊನೆಯ ದಿನ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ ಚ. ಅಂಗಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಡಾ. ವಿರುಪಾಕ್ಷಪ್ಪ ಸಾಧುನವರ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ನಂದಾ ಮಾರುತಿ ಕೊಳ್ಳಚವಾಡಕರ, ರನಜೀತ ಕಲ್ಲಪ್ಪ ಪಾಟೀಲ, ಕೃಷ್ಣಕಾಂತ ಕಾಮನ ಬಿರ್ಜೆ, ರಾಮಚಂದ್ರ ದತ್ತೋಬಾ ಪಾಟೀಲ, ಗೋಪಾಲ ಬಿ. ದೇಸಾಯಿ, ವಿಜಯ ಕೃಷ್ಣಾ ಮಾದರ, ರಾಮಚಂದ್ರ ಕೃಷ್ಣಾ ಗಾಂವಕರ, ಆನಂದ ರಮೇಶ ಪಾಟೀಲ, ಶ್ರೀಕಾಂತ ಬಾಲಕೃಷ್ಣ ಕದಮ, ಸುರೇಶ ಬಸಪ್ಪ ಮರಲಿಂಗನ್ನವರ, ಬದ್ರುದ್ದಿನ ಕಮದೊಡ್ಡ, ಅಶೋಕ ಬಾವಕನ ಚೌಗಲೆ, ನಿತೀನ ದುಂಡಿಯಾ ಆನಂದಾಚೆ, ಲಕ್ಷ್ಮಣ ಸೋಮನಾ ಮೇಲಗೆ, ಪ್ರಕಾಶ ಬಾಳಪ್ಪ ನೇಸರಕರ, ನೀಲಕಂಠ ಎಂ. ಪಾಟೀಲ, ವಿಶ್ವನಾಥ ರಘುನಾಥ ಭುವಾಜಿ, ಪ್ರಣಾಮ ಪ್ರಕಾಶ ಪಾಟೀಲ, ಸಂಜಯ ಶಿವಪ್ಪ ಕಾಂಬಳೆ, ಶಂಕರ ಪೋನಪ್ಪ ಚೌಗಲೆ, ನಾಗೇಶ ಸುಭಾಷ ಬೂಬಾಟೆ, ಸಂದೀಪ ವಸಂತ ಲಾಡ, ಸಚಿನ ಮನೋಹರ ನಿಕಮ, ಗಜಾನನ ಅಮೃತ ಟೋಕಣೆಕರ, ವಿನಾಯಕ ಗೋಪಾಲ ಗುಂಜಟಕರ, ದಿಲಶಾನಮ ಸಿಂಕದರ ತಹಶೀಲ್ದಾರ, ಸುನೀಲ ಲಗಮಣ್ಣ ಗುಡ್ಡಕಾಯು, ಮಾರುತಿ ಸಿದ್ದಪ್ಪ ಚೌಗಲೆ, ಕವಿತಾ ದೀಪಕ ಕೋಲೆ, ರಾಜೇಂದ್ರ ಯಲ್ಲಪ್ಪ ಪಾಟೀಲ, ಅಸಿದೋಶ ಶಶಿಕಾಂತ ಕಾಂಬಳೆ, ಕಲ್ಲಪ್ಪ ಕೃಷ್ಣಾ ಕೋವಾಡಕರ, ರಾಜು ಸಂಗಪ್ಪ ದಿವಟಗೆ, ಸಂಜಯ ಅಶೋಕ ಪಾಟೀಲ, ಪ್ರಭಾಕರ ಭುಜಂಗ ಪಾಟೀಲ, ಸುರೇಶ ಕೇಮಣ್ಣ ರಾಜುಕರ, ಲಕ್ಷ್ಮಿ ಸುನೀಲ ಮುತಗೇಕರ, ಖುರಶಿದಬಾನು ಅಸ್ಲಾಂ ನದಾಫ್, ಸಚಿನ ಶಾಂತಾರಾಮ ಕೇಳವೇಕರ, ದಯಾನಂದ ಚಿಕ್ಕಮಠ ನಾಮಪತ್ರ ಸಲ್ಲಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಡಾ. ವಿಶಾಲ್ ಆರ್. ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ. ಬೂದೆಪ್ಪ ಎಚ್.ಬಿ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಾಮಪತ್ರಗಳನ್ನು ಸ್ವೀಕರಿಸಿದರು.
ದಿನಾಂಕವಾರು ನಾಮಪತ್ರ ಸಲ್ಲಿಕೆ ವಿವರ: ಮಾರ್ಚ 28 ರಂದು ಎರಡು ನಾಮಪತ್ರ ಸಲ್ಲಿಕೆ, ಮಾರ್ಚ 29 ರಂದು ಒಂದು ನಾಮಪತ್ರ ಸಲ್ಲಿಕೆ, ಮಾರ್ಚ 30 ರಂದು ಆರು ನಾಮಪತ್ರ ಸಲ್ಲಿಕೆ, ಏಪ್ರಿಲ್ 2 ರಂದು ನಾಲ್ಕು ನಾಮಪತ್ರಗಳು ಸಲ್ಲಿಕೆ, ಏಪ್ರಿಲ್ 3 ರಂದು 20 ನಾಮಪತ್ರಗಳು ಸಲ್ಲಿಕೆ, ಏಪ್ರಿಲ್ 4 ರಂದು 43 ನಾಮಪತ್ರಗಳು ಸಲ್ಲಿಕೆಯಾಗಿದೆ.
ಪಕ್ಷವಾರು ನಾಮಪತ್ರ ಸಲ್ಲಿಕೆ ವಿವರ: ಭಾರತೀಯ ಜನತಾ ಪಕ್ಷದಿಂದ ಓರ್ವ ಅಭ್ಯರ್ಥಿಯಿಂದ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ನಾಲ್ಕು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದಿಂದ ಓರ್ವ ಅಭ್ಯರ್ಥಿಯಿಂದ ಒಂದು ನಾಮಪತ್ರ, ಸರ್ವ ಜನತಾ ಪಕ್ಷದಿಂದ ಓರ್ವ ಅಭ್ಯರ್ಥಿಯಿಂದ ಒಂದು ನಾಮಪತ್ರ, ಬಿ.ಎಸ್.ಪಿ ಪಕ್ಷದಿಂದ ಓರ್ವ ಅಭ್ಯರ್ಥಿಯಿಂದ ಒಂದು ನಾಮಪತ್ರ, ಆರ್‌ಪಿಐ ಪಕ್ಷದಿಂದ ಓರ್ವ ಅಭ್ಯರ್ಥಿಯಿಂದ ಒಂದು ನಾಮಪತ್ರ, ಪಿ.ಎಸ್.ಪಿ ಪಕ್ಷದಿಂದ ಓರ್ವ ಅಭ್ಯರ್ಥಿಯಿಂದ ಒಂದು ನಾಮಪತ್ರ ಹಾಗೂ ಎನ್‌ಡಬ್ಲ್ಯೂಪಿ ಪಕ್ಷದಿಂದ ಓರ್ವ ಅಭ್ಯರ್ಥಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿವೆ. 58 ಪಕ್ಷೇತರ ಅಭ್ಯರ್ಥಿಗಳು ಒಟ್ಟು 62 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಒಟ್ಟು 67 ಅಭ್ಯರ್ಥಿಗಳಿಂದ ಇಲ್ಲಿಯವರೆಗೆ 76 ನಾಮಪತ್ರಗಳು ಸಲ್ಲಿಕೆಯಾಗಿವೆ. ಏಪ್ರಿಲ್ 5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 8 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.