
ವಿಶ್ವಾಸಮತ ಯಾಚನೆ ವಿಷಯ ಮಂಡಿಸಿದ ಕುಮಾರಸ್ವಾಮಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಸ್ತಾಪವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದಾರೆ.
ಬೆಳಗ್ಗೆ ಕಲಾಪ ರಂಭವಾಗುತ್ತಿದ್ದಂತೆ ಕುಮಾರಸ್ವಾಮಿ ತಮ್ಮ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸಮತ ಯಾಚಿಸುವ ಪ್ರಸ್ತಾಪ ಮಂಡಿಸಿದರು. ಸ್ಪೀಕರ್ ರಮೇಶ ಕುಮಾರ ಚರ್ಚೆಗೆ ಹಾಕಿದರು.
ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಹಿಂದಿನ ಹಲವಾರು ಸಂದರ್ಭಗಳನ್ನು ಮುಂದಿಟ್ಟು, ಒಂದೇ ದಿನದಲ್ಲಿ ಚರ್ಚೆ ಮುಗಿಸಿ ಮತಕ್ಕೆ ಹಾಕುವಂತೆ ಕೋರಿದರು.
ನೀವಿಬ್ಬರೂ ಒಪ್ಪಿದರೆ ಐದೇ ನಿಮಿಷದಲ್ಲಿ ಮತಕ್ಕೆ ಹಾಕುತ್ತೇನೆ. ಆದರೆ ರಾಜ್ಯದ ಇಂದಿನ ಸ್ಥಿತಿ ಮತ್ತು ಸುಪ್ರಿಂ ಕೋರ್ಟ್ ವರೆಗೂ ಹೋಗಿರುವುದನ್ನು ಗಮನಿಸಿ ಇಬ್ಬರೂ ಕಲಾಪ ನಡೆಸುವಂತೆ ಸ್ಪೀಕರ್ ಕೋರಿದರು.
ಇದೀಗ ಕುಮಾರಸ್ವಾಮಿ ಮಾತು ಆರಂಭಿಸಿದ್ದು, ಬಹಳ ಆಕ್ರೋಶದಿಂದ ಮಾತನಾಡುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಬಹಳ ಆತುರದಲ್ಲಿರುವಂತೆ ಕಾಣುತ್ತದೆ. ಆದರೆ ನಮ್ಮ ಸರಕಾರದ ಬಗ್ಗೆ ಬಂದಿರುವ ಟೀಕೆ, ಆರೋಪಗಳ ಬಗ್ಗೆ ಉತ್ತರಿಸಬೇಕೋ ಬೇಡವೋ… ಎಂದು ಛೇಡಿಸಿದರು.