*ಯತ್ನಾಳ್ ಸಿಎಂ ಆದರೂ ಒಳ್ಳೆಯದು: ಶಾಸಕ ಬಾಲಚಂದ್ರ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಯತ್ನಾಳ್ ಸಿಎಂ ಆದರೂ ಒಳ್ಳೆಯದು. ಉತ್ತರ ಕರ್ನಾಟಕದವರು ಸಿಎಂ ಆದರೆ ಒಳ್ಳೆಯದು, ಅವರು ಸಿಎಂ ಆದರೆ ನಾನು ಖುಷಿ ಪಡುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ
ಬುಧವಾರ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣೆ ಬಂದಾಗ ಸ್ವಾಭಿಮಾನ ನೆನಪಾಗುತ್ತೆ. ಯಾರೇ ಚುನಾವಣೆಗೆ ನಿಂತರು ಇದನ್ನು ಹೇಳುತ್ತಾರೆ. ಜಗದೀಶ್ ಶೆಟ್ಟರ್ ಹೊರಗಿನವರು ಎನ್ನವುದು ಜನ ಮರೆತಿದ್ದಾರೆ. ಸ್ಥಳೀಯರು ಟಿಕೆಟ್ ಕೇಳಿದ್ದರಿಂದ ಹೊರಗಿನವರು ಎನ್ನುವ ವಿಚಾರ ಪ್ರಸ್ತಾಪ ಆಗಿತ್ತು. ನಾಮಪತ್ರ ಸಲ್ಲಿಕೆ ವೇಳೆ ಸಾವಿರಾರು ಜನ ಬಂದಿದ್ದರು. ಅತಿ ಹೆಚ್ಚು ಲೀಡ್ ನಿಂದ ಜಗದೀಶ್ ಶೆಟ್ಟರ್ ಅವರು ಗೆಲ್ಲುತ್ತಾರೆ. ಮೋದಿ ಅಲೆ, ಜನರ ಪ್ರತಿಕ್ರಿಯೆ ನೋಡಿದರೆ ಗೊತ್ತಾಗುತ್ತೆ. ಎಲ್ಲಾ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಇದೆ ಎಂದರು.
ಲಿಂಗಾಯತ ಅಸ್ತ್ರ ಪ್ರಯೋಗ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ ಬಂದಾಗ ಇದೆಲ್ಲ ಸ್ವಾಭಾವಿಕ. ಜನ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ, ವರ್ಕ್ ಔಟ್ ಆಗಲ್ಲ ಎಂದರು.
ದೇಶದಲ್ಲಿ ಎನ್ ಡಿ ಎ ಅತಿಹೆಚ್ಚು ಸ್ಥಾನ ಗೆಲ್ಲಲ್ಲಿದೆ. ದಿ.ಸುರೇಶ ಅಂಗಡಿ ಮಂತ್ರಿ ಆಗಿದ್ದರಿಂದ ಎಷ್ಟೊಂದು ಕೆಲಸಗಳು ಆಗಿವೆ. ಜಗದೀಶ್ ಶೆಟ್ಟರ್ ಗೆದ್ದು ಕೇಂದ್ರ ಮಂತ್ರಿ ಆದರೆ ಒಳ್ಳೆಯದು. ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ