ಪ್ರಗತಿವಾಹಿನಿ ಸುದ್ದಿ : ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇಂದಿನಿಂದ ಪುಷ್ಪಗಳ ಕಲರವ ಶುರುವಾಗಲಿದೆ. ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ವಿದ್ಯುಕ್ತ ಚಾಲನೆ ನೀಡಿದ್ದಾರೆ.
ಇಂದಿನಿಂದ ಅಂದರೆ ಜನವರಿ 16 ರಿಂದ 27 ರವರೆಗೆ ಒಟ್ಟು 12 ದಿನಗಳ ಕಾಲ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಪ್ರವೇಶದ್ವಾರದ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಹಿನ್ನಲೆ ಆನ್ಲೈನ್ ಮೂಲಕ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.
ಪ್ರವೇಶ ದ್ವಾರದ ಬಳಿ ಜನದಟ್ಟಣೆಯನ್ನು ಕಡಿಮೆ ಮಾಡುವ ಹಿನ್ನಲೆ ತೋಟಗಾರಿಕಾ ಇಲಾಖೆಯು ವೆಬ್ಸೈಟ್ನಲ್ಲಿ ಕ್ಯೂ ಆರ್ ಕೋಡ್ ಅನ್ನ ಪ್ರಕಟಿಸಲಾಗಿದೆ. ಸಾರ್ವಜನಿಕರು ಆದಷ್ಟು ಆನ್ಲೈನ್ ಟಿಕೆಟ್ ಪಡೆದು ಬರೋದು ಉತ್ತಮ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.
ಇನ್ನು ಫಲ ಪುಷ್ಪ ಪ್ರದರ್ಶನಕ್ಕೆ ಬರುವ ಜನರಿಗೆ ಪ್ರವೇಶ ಟಿಕೆಟ್ ದರ ನಿಗದಿ ಮಾಡಿದ್ದು ಹಿರಿಯರಿಗೆ 80 ರಿಂದ 100 ರೂ, ಹಾಗೆ ಮಕ್ಕಳಿಗೆ 30 ರೂ. ನಿಗದಿಪಡಿಸಲಾಗಿದೆ. ಜೊತೆಗೆ ಶಾಲಾ ಸಮವಸ್ತ್ರ ತೊಟ್ಟು ಬರುವ ವಿಧ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗಿದೆ.
ಇನ್ನು ಫ್ಲವರ್ ಶೋಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ಬದಲಾವಣೆ ಕ್ರಮ ಕೈಗೊಂಡಿದ್ದಾರೆ. ಆದಷ್ಟು ಲಾಲ್ಬಾಗ್ ರಸ್ತೆ ಹಾಗೂ ನೆರೆಯ ರಸ್ತೆ ಬಳಸದೇ ಸಿಟಿಗೆ ತೆರಳುವವರು ಜೆ.ಸಿ ರಸ್ತೆ ಬಳಸುವಂತೆ ಕೋರಲಾಗಿದೆ.
ಇನ್ನು ಫಲಪುಷ್ಪ ಪ್ರದರ್ಶನಕ್ಕೆ ಬರುವವರ ವಾಹನಗಳ ಪಾರ್ಕಿಂಗ್ ಗೆ ಗುರುತಿಸಲಾಗಿರುವ ಸ್ಥಳಗಳು ಹೀಗಿವೆ ಡಾ.ಮರಿಗೌಡ ರಸ್ತೆ, ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ದ್ವಿ-ಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದು. ಇನ್ನು ಕೆ.ಹೆಚ್.ರಸ್ತೆ, ಶಾಂತಿನಗರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಲ್ಲಿ ಕಾರು ನಿಲುಗಡೆ ಮಾಡಬಹುದು. ಮರಿಗೌಡ ರಸ್ತೆ- ಹಾಪ್ ಕಾಮ್ಸ್ ನಲ್ಲಿ ದ್ವಿ-ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆಗೆ ಅವಕಾಶ ಮಾಡಲಾಗಿದೆ. ಇನ್ನುಳಿದಂತೆ ಜೆ.ಸಿ. ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ಟು ವೀಲರ್ ಹಾಗೂ ಫೋರ್ ವೀಲರ್ ನಿಲುಗಡೆ ಮಾಡಬಹುದು.
ಕೆಲವು ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ನಿಷೇಧಿಸಲಾಗಿದ್ದು ಡಾ: ಮರಿಗೌಡ ರಸ್ತೆ, ಲಾಲ್ ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಅವಕಾಶವಿಲ್ಲ. ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ನಿಲ್ದಾಣ ನಿಷೇಧವಿದೆ.ಲಾಲ್ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್ಬಾಗ್ ಮುಖ್ಯದ್ವಾರದ ವರೆಗೆ, ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ ವರೆಗೆ,ಬಿಟಿಎಸ್ ಬಸ್ ಸ್ಟಾಪ್ ಬಿಎಂಟಿಸಿ ಜಂಕ್ಷನ್ ನಿಂದ ಪೋಸ್ಟ್ ಆಫೀಸ್ ರಸ್ತೆಯ ಎರಡೂ ಬದಿಗಳಲ್ಲಿ ಮತ್ತು ಕೃಂಬಿಗಲ್ ರಸ್ತೆಯ ಎರಡೂ ಕಡೆಗಳಲ್ಲಿ ಹಾಗೂ ಲಾಲ್ಬಾಗ್ ವೆಸ್ಟಿಗೇಟ್ನಿಂದ ಆರ್.ವಿ. ಟೀಚರ್ ಕಾಲೇಜ್ವರೆಗೆ ಮತ್ತು ಆರ್ವಿ ಟೀಚರ್ ಕಾಲೇಜ್ನಿಂದ ಅಶೋಕ ಪಿಲ್ಲರ್ ವರೆಗೆ ಮತ್ತು ಅಶೋಕ ಪಿಲ್ಲರ್ನಿಂದ ಸಿದ್ದಾಪುರ ಜಂಕ್ಷನ್ ವರೆಗೆ ಎಲ್ಲಿಯೂ ವಾಹನ ನಿಲುಗಡೆ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ