Latest

15 ದಿನಗಳಲ್ಲಿ ಪೂರ್ಣ ಸರ್ಕಾರ ಅಸ್ತಿತ್ವಕ್ಕೆ: ದಾಖಲೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸುಭದ್ರ ಸರ್ಕಾರಕ್ಕೆ ಎದೆಗಾರಿಕೆಯ ಮುನ್ನುಡಿ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ಚುನಾವಣಾ ಫಲಿತಾಂಶ ಪ್ರಕಟವಾಗಿ ಹದಿನೈದು ದಿನಗಳ ಒಳಗಾಗಿ ಸಂಪೂರ್ಣ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, “ನಾಡಿನ ಜನತೆ ಸುಭದ್ರ ಮತ್ತು ಸ್ವಚ್ಚ ಆಡಳಿತಕ್ಕಾಗಿ ನಮಗೆ ಪೂರ್ಣ ಬಹುಮತ ನೀಡಿದ್ದಾರೆ. ಜನರ ನಿರೀಕ್ಷೆಯಂತೆ ಸರ್ಕಾರ ನಡೆಯಲಿದೆ” ಎಂದು ವಾಗ್ದಾನ ಮಾಡಿದ್ದರು.

Home add -Advt

ಈ ವಾಗ್ದಾನದ ಮೊದಲ ಹೆಜ್ಜೆಯಾಗಿ ಸಂಪೂರ್ಣ ಸಂಪುಟ ಹೆಚ್ಚಿನ ಭಿನ್ನಾಭಿಪ್ರಾಯಗಳು ಇಲ್ಲದ ರೀತಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಏಕ ವ್ಯಕ್ತಿ ಸರ್ಕಾರದ ಪರದಾಟಗಳಿಗೆ ನಾಡಿನ ಜನತೆ ಬೇಸತ್ತಿದ್ದರು. ಸಚಿವ ಸಂಪುಟ ವಿಸ್ತರಣೆಗಾಗಿ ದೆಹಲಿಗೆ ಅಲೆದ ಮುಖ್ಯಮಂತ್ರಿಗಳ ಅಸಹಾಯಕತೆಗೂ ನಾಡಿನ ಜನತೆ ಸಾಕ್ಷಿ ಆಗಿದ್ದರು. ಹೈ ಕಮಾಂಡ್ ಮುಂದೆ ದಂಡಯಾತ್ರೆ ಹೊಡೆದೂ ಬರಿಕೈಲಿ ವಾಪಸ್ಸಾಗುತ್ತಿದ್ದ ದುರ್ಬಲ ಆಡಳಿತಕ್ಕೂ ಕನ್ನಡಿಯಾಗಿದ್ದ ನಾಡಿನ ಜನತೆ ಇಂದು ಅತ್ಯಂತ ಎದೆಗಾರಿಕೆಯ ಸಂಪೂರ್ಣ ಸಂಪುಟದ ಸುಭದ್ರ ಸರ್ಕಾರಕ್ಕೆ ಸಾಕ್ಷಿಯಾಗಿದ್ದಾರೆ.

ಎರಡು ಮೂರು ಸಚಿವ ಸ್ಥಾನಗಳನ್ನು ಖಾಲಿ ಇಟ್ಟುಕೊಂಡು ಸರ್ಕಾರದ ಅವಧಿ ಮುಗಿಯುವವರೆಗೂ, ಮೂಗಿಗೆ ತುಪ್ಪ ಸವರುತ್ತಲೇ ಸರ್ಕಾರದ ಮೇಲೆ ನಿಯಂತ್ರಣ ಪಡೆಯಲು ಸರ್ಕಸ್ ಮಾಡದೆ ಪೂರ್ಣ ಪ್ರಮಾಣದ ಸರ್ಕಾರವನ್ನು ಅತ್ಯಂತ ಆತ್ಮಬಲದಿಂದ, ಆತ್ಮವಿಶ್ವಾಸದಿಂದ ಸಿದ್ದರಾಮಯ್ಯ ಅವರು ಅಸ್ತಿತ್ವಕ್ಕೆ ತಂದಿದ್ದಾರೆ.

ಒಂದೆರಡು ಜಿಲ್ಲೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಒಂದೆರಡು ಪ್ರಾತಿನಿಧ್ಯ ನೀಡಿದ್ದಾರೆ. ಮುಂಗಾರಿನ ಹೊಸ್ತಿಲಿನಲ್ಲಿರುವ ನಾಡು ಉತ್ತಮ ಮಳೆ ಬೆಳೆಯ ನಿರೀಕ್ಷೆಯಲ್ಲಿದೆ. ಇದಕ್ಕೆ ಪೂರಕವಾಗಿ ರೈತ ಸಮುದಾಯದ ಅಗತ್ಯಗಳ ಮೇಲೆ ನಿಗಾ ಇಡಲು ಈ ಪೂರ್ಣ ಪ್ರಮಾಣದ ಸರ್ಕಾರಕ್ಕೆ ಸಾಧ್ಯವಾಗಲಿದೆ. ಈ ಮೂಲಕ ಚುರುಕಿನ ಮತ್ತು ಕ್ರಿಯಾಶೀಲ ಆಡಳಿತಕ್ಕೆ ಮುನ್ನುಡಿ ಬರೆದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ .

https://pragati.taskdun.com/lakshmi-hebbalkar24-ministersoathcongress-govtrajabhavana/

Related Articles

Back to top button