
ಯಡಿಯೂರಪ್ಪ ನಗರ ಪ್ರದಕ್ಷಿಣೆ; ರೋಟರಿ, ಕ್ರೆಡೈ ಪರಿಹಾರ… ಇನ್ನಷ್ಟು ಸುದ್ದಿಗಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ ಮತ್ತು ಆರೆಸ್ಸೆಸ್ ಜೊತೆಗೂಡಿ ಪರಿಹಾರ ಕಾರ್ಯಗಳಲ್ಲಿ ತೊಡಗಿವೆ. ಆಹಾರ ಪಟ್ಟಣಗಳ ವಿತರಣೆಯಲ್ಲಿ ಸಕ್ರಿಯವಾಗಿ ಕ್ರೆಡೈ ಕೂಡ ಪಾಲ್ಗೊಂಡಿದೆ . ರೋಟರಿ ಕ್ಲಬ್ ನ ಆನಂದ್ ಬುಕ್ಕೆ ಬಾಗ್, ಜಯಸಿಂಹ ಬೆಳಗಲ್ ಮತ್ತು ಕ್ರೆಡೈನ ಹರ್ಷದ್ ಕಲಘಟಗಿ ಅವರು ಸಕ್ರಿಯವಾಗಿ ಪರಿಹಾರ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕ್ರೆಡೈ ರಾಜ್ಯ ನಿಯೋಜಿತ ಅಧ್ಯಕ್ಷ ಚೈತನ್ಯ ಕುಲಕರ್ಣಿ ಇಸ್ರೆಲ್ ಪ್ರವಾಸದಲ್ಲಿದ್ದು, ಅಲ್ಲಿಂದಲೇ ಪ್ರವಾಹ ಪರಿಹಾರಕ್ಕೆ ತಮ್ಮ ತಂಡಕ್ಕೆ ಸೂಚನೆ ನೀಡುತ್ತಿದ್ದಾರೆ.
ಬೆಳಗಾವಿಯ ಹಲವಾರ ಕುಟುಂಬಗಳು ಸ್ಥಳಾಂತರವಾಗುತ್ತಿವೆ. ಜನರು ಮನೆಗಳಿಗೆ ಬೀಗ ಹಾಕಿ ಸಂಬಂಧಿಕರ ಊರುಗಳಿಗೆ ತೆರಳುತ್ತಿದ್ದಾರೆ. ಮನೆಗಳು ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಮತ್ತು ಇನ್ನೂ ಒಂದು ವಾರ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಸ್ಥಳಾಂತರವಾಗುತ್ತಿದ್ದಾರೆ.
ನಗರದ ಬಹುಪಾಲು ಪ್ರದೇಶ ಕತ್ತಲಮಯವಾಗಿದೆ. ಕುಡಿಯುವ ನೀರು, ಹಾಲು ಮತ್ತಿತರ ಸಾಮಗ್ರಿಗಳ ಪೂರೈಕೆಯೂ ಕಷ್ಟವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ