Kannada NewsKarnataka NewsLatest

ನೇಕಾರ ಸಮ್ಮಾನ್ ನಿಧಿ ಘೋಷಿಸಿದ ಸಿಎಂ ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದ  ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ “ಬೆಳಗಾವಿ ಜಿಲ್ಲೆ ಮತ್ತು  ಉತ್ತರ ಕರ್ನಾಟಕ ನೇಕಾರ ಸಮಾಜದ ಪ್ರಮುಖರ ನಿಯೋಗವು ಇಂದು ಬೆಂಗಳೂರಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತ್ತು.
ಗೃಹ ಕಚೇರಿ ಕೃಷ್ಣಾ ದಲ್ಲಿ  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ  ನೇಕಾರ ವಿಶೇಷ ಸಭೆ ಜರುಗಿತು. ಸುಮಾರು  55 ನಿಮಿಷಗಳ ಕಾಲ ರಾಜ್ಯದ ನೇಕಾರರ ಪ್ರಚಲಿತ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ   ರೈತರ ಕಿಸಾನ್ ಸನ್ಮಾನ ನಿಧಿ ಯೋಜನೆಯಂತೆ  ರಾಜ್ಯದ ನೇಕಾರರ ಕುಟುಂಬಗಳಿಗೂ  2000 ರೂ,  ದಂತೆ  “ನೇಕಾರ ಸಮ್ಮಾನ್ ನಿಧಿ” ನೀಡುವುದಾಗಿ  ಮುಖ್ಯಮಂತ್ರಿಗಳು  ಘೋಷಣೆ ಮಾಡಿದರು.
 ಸರಕಾರಿ ವಿವಿಧ ಇಲಾಖೆಗಳಿಗೆ ಬೇಕಾದ ಬಟ್ಟೆ /ಸೀರೆಗಳನ್ನು ರಾಜ್ಯದ ನೇಕಾರರಿಂದಲೇ ನೇರವಾಗಿ ಉತ್ಪಾದಿಸಿ ಖರೀದಿಸುವ ಆದೇಶ ನೀಡುವ  ನಿರ್ಣಯ ಮಾಡಲಾಯಿತು .
 ಸಾಲಮನ್ನಾ ಯೋಜನೆಯ ಅವಧಿಯನ್ನು  31/3/2019 ದಿಂದ  31/06/2020 ರ ವರೆಗೂ  ಅವಧಿ ವಿಸ್ತರಣೆ ಮಾಡಿ,  ಸಾಲ ಮತ್ತು ಬಡ್ಡಿ ಮನ್ನಾ ಯೋಜನೆ ಹೊಸ ಮಾರ್ಗ ‌ಸೂಚಿ ರಚಿಸಲು ತೀರ್ಮಾನಿಸಲಾಯಿತು.
 ಉತ್ತರ ಕರ್ನಾಟಕ ನೇಕಾರರ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಅನುದಾನ ನೀಡುವಂತೆ ಚರ್ಚೆಯಲ್ಲಿ ಉತ್ತರ ಕರ್ನಾಟಕದ ಶಾಸಕರುಗಳಾದ  ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ,   ಸಿದ್ದು ಸವದಿ, ಚರಂತಿಮಠರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿ ನೇಕಾರ ಮುಖಂಡರ ನಿಯೋಗದ ಪ್ರತಿನಿಧಿಗಳಾದ  ಜಿ. ರಮೇಶ್,  ಗಜಾನನ ಗುಂಜೇರಿ,  ಸಂತೋಷ ಟೊಪಗಿ, ಭುಜಂಗ್ ಭಂಡಾರಿ,  ವೆಂಕಟೇಶ್ ವನಹಳ್ಳಿ,  ಶಂಕರ ಢವಳಿ,  ಈರಪ್ಪಾ ತಿಗಡಿ,
ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button