Latest

ಸರಕಾರವೋ… ರಾಷ್ಟ್ರಪತಿ ಆಡಳಿತವೋ ನೋಡೋಣ…

ಸರಕಾರವೋ… ರಾಷ್ಟ್ರಪತಿ ಆಡಳಿತವೋ ನೋಡೋಣ…

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ರಾಷ್ಟ್ರಪತಿ ಆಡಳಿತ ಬರುತ್ತದೆಯೋ… ನೀವು ಸರಕಾರ ರಚಿಸುತ್ತೀರೋ ನೋಡೋಣ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳುವ ಮೂಲಕ ವಿಧಾನಸಭೆಯಲ್ಲಿ ತಮ್ಮ ವಿಶ್ವಾಸಮತ ಮಂಡನಾ ಭಾಷಣ ಮುಗಿಸಿದರು.

ರಾಜ್ಯಪಾಲರು ನನಗೆ ಎರಡನೇ ಪತ್ರ ಬರೆದಿದ್ದಾರೆ. ಇದು ಸರಕಾರಕ್ಕೆ ಎರಡನೇ ಪ್ರೇಮ ಪತ್ರ. ರಾಜ್ಯಪಾಲರಿಗೆ ಈಗ ಜ್ಞಾನೋದಯವಾಗಿದೆ. ಇಲ್ಲಿಯವರೆಗೆ ಕುದುರೆ ವ್ಯಾಪಾರ ನಡೆಯುತ್ತಿದ್ದರೂ ಅವರಿಗೆ ಎಚ್ಚರವಾಗಿರಲಿಲ್ಲ ಎಂದು ನೇರವಾಗಿ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಈಗಿನ ರಾಜಕೀಯ ನಾಟಕದಲ್ಲಿ ಸರಕಾರವೋ… ರಾಷ್ಟ್ರಪತಿ ಆಡಳಿತವೋ ನೋಡೋಣ ಎಂದರು.

Home add -Advt

ಆದರೆ ರಾಜ್ಯಪಾಲರ ಎರಡನೇ ಗಡುವಿನೊಳಗೆ ವಿಶ್ವಾಸಮತ ಯಾಚಿಸುವ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಇನ್ನೂ 15-20 ಜನ ಮಾತನಾಡಲು ಬಯಸಿದ್ದಾರೆ. ಅವರಿಗೆಲ್ಲ ಮಾತನಾಡಲು ಅವಕಾಶ ಕೊಡಿ ಎಂದು ಅವರು ಸ್ಪೀಕರ್ ಬಳಿ ವಿನಂತಿಸಿದರು.

ಇಂದು ಸದನ ಮುಕ್ತಾಯವಾಗುವವರೆಗೂ ವಿಶ್ವಾಸಮತ ಯಾಚಿಸುವ ಯಾವುದೇ ಸಾಧ್ಯತೆ ಇಲ್ಲ. ಸೋಮವಾರಕ್ಕೆ ಸದನ ಮುಂದೂಡಲ್ಪಡಬಹುದು.

 

 

Related Articles

Back to top button