GIT add 2024-1
Laxmi Tai add
Beereshwara 33

*ಸಹಕಾರಿ ಸಂಘಗಳ ಗಮನಕ್ಕೆ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸಹಕಾರ ಸಂಘಗಳ ನಿಯಮಗಳರೀತ್ಯ ಸೌರ್ಹಾದ ಸಹಕಾರಿಯ ಮುಖ್ಯಕಾರ್ಯನಿರ್ವಾಹಕರು ವಾರ್ಷಿಕ ಮಹಾನಭೆಯಲ್ಲಿ ಲೆಕ್ಕಪರಿಶೋಧಕರ ಅಥವಾ ಲೆಕ್ಕಪರಿಶೋಧನಾ ಫರ್ಮ್‌ನ್ನು ನೇಮಕ ಮಾಡಿಕೊಂಡ ಬಗ್ಗೆ ವಾರ್ಷಿಕ ಮಹಾಸಭೆಯ ದಿನಾಂಕದಿಂದ ೦೭ ದಿನಗಳೊಳಗಾಗಿ ಇಲಾಖಾ ಲೆಕ್ಕಪರಿಶೋಧಕರಿಗೆ ಅಥವಾ ಸನ್ನದು ಲೆಕ್ಕಪರಿಶೋಧನ ಸಂಸ್ಥೆಗೆ ಮತ್ತು ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕರಿಗೆ ತಿಳಿಸಬೇಕಾಗಿರುತ್ತದೆ.

Emergency Service


ಜಿಲ್ಲೆಯಲ್ಲಿ ಇದುವರೆಗೆ ಮಾಹಿತಿಯನ್ನು ಸಲ್ಲಿಸದೆ ಇರುವ ಸಹಕಾರ ಸಂಘಗಳು ಈ ಪ್ರಕಟಣೆಯಾದ ೭ ದಿನಗಳೊಳಗಾಗಿ ವಾರ್ಷಿಕ ಮಹಾಸಭೆಯಲ್ಲಿ ಇಲಾಖಾ ಲೆಕ್ಕಪರಿಶೋಧಕರನ್ನು/ ಸನ್ನದು ಲೆಕ್ಕಪರಿಶೋಧನಾ ಸಂಸ್ಥೆಯನ್ನು ನೇಮಕಾತಿ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ವಾರ್ಷಿಕ ಮಹಾಸಭೆಯ ನಡವಳಿಯೊಂದಿಗೆ ಜಂಟಿ ನಿರ್ದೇಶಕರ ಕಚೇರಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಬೆಳಹಾವಿ ಜಿಲ್ಲೆ, ಬೆಳಗಾವಿ ಸುವರ್ಣ ವಿಧಾನ ಸೌಧ ಕೊಠಡಿ ಸಂಖ್ಯೆ ೧೬,೧೭ ದಕ್ಷಿಣದ್ವಾರ ಬೆಳಗಾವಿ-೫೯೦೦೨೦ ದೂರವಾಣಿ ಸಂಖ್ಯೆ ೦೮೩೧-೨೪೩೨೫೭೯ ಕಚೇರಿಗೆ ಸಲ್ಲಿಸಬೇಕು.

ಇಲ್ಲವಾದಲ್ಲಿ ಸಹಕಾರ ಸಂಘಗಳ ನಿಯಮಗಳಂತೆ ಸಂಘದ ಲೆಕ್ಕಪತ್ರಗಳ ಪರಿಶೋಧನೆಯನ್ನು ಮಾಡಲು ಲೆಕ್ಕಪರಿಶೋಧಕರನ್ನು ಇಲಾಖೆಯಿಂದ ನೇಮಕ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bottom Add3
Bottom Ad 2