Wanted Tailor2
Cancer Hospital 2
Bottom Add. 3

ಹೆಲ್ಮೆಟ್ ನಲ್ಲಿ ಹೊಕ್ಕ ನಾಗಪ್ಪ; ಬೆಚ್ಚಿಬಿದ್ದ ವ್ಯಕ್ತಿ ಅರಣ್ಯಇಲಾಖೆಗೆ ಮೊರೆ

ಪ್ರಗತಿವಾಹಿನಿ ಸುದ್ದಿ, ತಿರುವನಂತನಪುರ: ಬೂಟಿನಲ್ಲಿ ಹೊಕ್ಕು “ಬುಸ್” ಎಂದು ಅಬ್ಬರಿಸಿದ ನಾಗಪ್ಪನ ಬಗ್ಗೆ ಕೇಳಿರಬಹುದು. ಆದರೆ ಸಣ್ಣ ನಾಗರಹಾವೊಂದು ಹೆಲ್ಮೆಟ್ ಒಳಗೆ ಅವಿತುಕೊಳ್ಳುವ ಮೂಲಕ ಪಾದದಿಂದ ತಲೆವರೆಗೂ ರಿಸ್ಕ್ ಇದೆಯೆಂಬ ಎಚ್ಚರಿಕೆಯ ಸಂದೇಶ ನೀಡಿದೆ.

ಕೇರಳದಲ್ಲಿ ವ್ಯಕ್ತಿಯೊಬ್ಬರು ತಮ್ಮ ಹೆಲ್ಮೆಟ್‌ನೊಳಗೆ ಸಣ್ಣ ನಾಗರಹಾವೊಂದು ತಳಕಿ ಹಾಕಿಕೊಂಡು ಕುಳಿತಿದ್ದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಕೂಡಲೆ ಅವರು ನೆರವಿಗಾಗಿ ಸ್ಥಳೀಯ ಅರಣ್ಯ ಇಲಾಖೆ ಕಚೇರಿಗೆ ಹೋಗಿದ್ದಾರೆ.

ಅರಣ್ಯ ಅಲಾಖೆಯವರು ಉರಗಸ್ನೇಹಿಯೊಬ್ಬರ ನೆರವಿನೊಂದಿಗೆ ಸ್ಥಳಕ್ಕೆ ತೆರಳಿ ಹೆಲ್ಮೆಟ್‌ನಿಂದ ಹಾವನ್ನು ಹೊರತೆಗೆದಿದ್ದಾರೆ. ಈ ಕುರಿತ ವಿಡಿಯೊವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಉರಗಸ್ನೇಹಿಯ ಪ್ರಕಾರ, ಹಾವು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಭಾರೀ ವಿಷಕಾರಿಯಾಗಿದ್ದು ಅಪಾಯಕಾರಿ ಎನಿಸಿದೆ.

Bottom Add3
Bottom Ad 2

You cannot copy content of this page