Latest

ದೇಶಾದ್ಯಂತ ಏರಿಕೆಯಾಗುತ್ತಲೇ ಇದೆ ಶೀತಜ್ವರ ಪ್ರಕರಣ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಎರಡು ತಿಂಗಳುಗಳ ಅವಧಿಯಲ್ಲಿ ದೇಶದಾದ್ಯಂತ ಶೀತಜ್ವರ (Influenza) ಪ್ರಕರಣಗಳ ಸಂಖ್ಯೆಯಲ್ಲಿ ವ್ಯಾಪಕ ಪ್ರಮಾಣದ ಏರಿಕೆ ಕಂಡುಬಂದಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಹಿತಿ ನೀಡಿದೆ.

ಒಂದೆಡೆ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿರುವುದರ ಬೆನ್ನಿಗೇ ಶೀತ ಜ್ವರ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ಎಚ್​3ಎನ್​2 ವೈರಸ್​​ನಿಂದಾಗಿ (H3N2 virus) ಈ ಸೋಂಕು ವ್ಯಾಪಿಸತೊಡಗಿದೆ. ಇದೇ ವೇಳೆ ಇದರ ಉಪ ತಳಿಗಳ ಸೋಂಕುಗಳಿಗಿಂತಲೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ.

ಶೀತಜ್ವರ ಪ್ರಕರಣಗಳಿಗೆ ಒಳಗಾದವರಿಗೆ ನಿರಂತರ ಕೆಮ್ಮು, ಜ್ವರ, ಕಫ, ವಾಕರಿಕೆ, ವಾಂತಿ, ಗಂಟಲಿನ ಸೋಂಕು, ಮೈಕೈ ನೋವು, ಭೇದಿ ಇತ್ಯಾದಿ ಲಕ್ಷಣಗಳು ಕಾಣಿಸುತ್ತಿವೆ. ಇತ್ತೀಚಿನ ಪ್ರಕರಣಗಳಲ್ಲಿ ಸೋಂಕಿತರು ದೀರ್ಘ ಕಾಲದವರೆಗೆ ಸೋಂಕಿನ ಲಕ್ಷಣ ಹೊಂದಿರುವುದು ಕಂಡುಬಂದಿದೆ. ಗುಣಮುಖರಾದ ನಂತರವೂ ಇದರ ಪರಿಣಾಮಗಳು ಭಾಧಿಸುತ್ತಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಜ್ಞರು ತಿಳಿಸಿದ್ದಾರೆ.

ಅನೇಕ ಜನ ಇಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತಲೇ ವೈದ್ಯರ ಸಲಹೆ ಪಡೆಯದೆ ನೇರವಾಗಿ ಔಷಧ ಅಂಗಡಿಗಳಿಂದ ಮಾತ್ರೆ, ಔಷಧಗಳನ್ನು ಖರೀದಿಸಿ ಸೇವಿಸುತ್ತಿದ್ದು ಇಂಥ ಪ್ರಯತ್ನಗಳಿಗೆ ಕೈ ಹಾಕದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಜ್ಞರು ಸಲಹೆ ನೀಡಿದ್ದಾರೆ. ಇದು ಪ್ರತಿ ಪರಿಣಾಮವನ್ನು ಉಂಟುಮಾಡುವ ಸಂಭವ ಹೆಚ್ಚಿರುವುದರಿಂದ ಆದಷ್ಟೂ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದು ಔಷಧ ಸೇವಿಸಲು ತಜ್ಞರು ಸಲಹೆ ನೀಡಿದ್ದಾರೆ.

https://pragati.taskdun.com/a-student-who-drank-alcohol-and-urinated-on-a-co-passenger/

https://pragati.taskdun.com/praveen-nettaru-murder-case-another-accused-was-arrested-in-a-cinematic-fashion/
https://pragati.taskdun.com/education-department-has-given-good-news-to-puc-second-year-students/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button