Latest

ಒಂದು ಫೋಟೋ, ಒಂದೇ ಒಂದು ಕಮೆಂಟ್; ಯುವತಿಯನ್ನೇ ಗುಂಡಿಟ್ಟು ಕೊಂದ ಕ್ಲಾಸ್ ಮೇಟ್

ಪ್ರಗತಿವಾಹಿನಿ ಸುದ್ದಿ; ಡೆಹ್ರಾಡೂನ್: ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯೋರ್ವಳು ಹಾಕಿದ್ದ ಫೋಟೋ, ಆ ಫೋಟೋಗೆ ವಿದ್ಯಾರ್ಥಿ ಮಾಡಿದ್ದ ಕಮೆಂಟ್ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ.

ಡೆಹ್ರಾಡೂನ್ ಸಿದ್ಧಾರ್ಥ್ ಕಾಲೇಜಿನಲ್ಲಿ ಬಿ ಫಾರ್ಮಾ ಓದುತ್ತಿದ್ದ ವಂಶಿಕಾ ಎಂಬ ವಿದ್ಯಾರ್ಥಿನಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿದ್ದಳು. ಆ ಫೋಟೋ ಗೆ ಆಕೆಯ ಸಹಪಾಠಿ ಆದಿತ್ಯ ಥೋಮರ್ ಎಂಬಾತ ಕಮೆಂಟ್ ಹಾಕಿದ್ದ. ಇಲ್ಲಿಂದ ಇಬ್ಬರ ನಡುವೆ ಆರಂಭವಾಗಿದ್ದ ಜಗಳ ಇದೀಗ ಆದಿತ್ಯ ಯುವತಿಯನ್ನೇ ಗುಂಡಿಟ್ಟು ಹತ್ಯೆ ಮಾಡಿದ ಘಟನೆಗೆ ಸಾಕ್ಷಿಯಾಗಿದೆ.

ಬನ್ಸಾಲ್ ಡೂನ್ ನ ಹಾಸ್ಟೇಲ್ ಬಳಿ ನಿಂತಿದ್ದ ವಂಶಿಕಾಳನ್ನು ಬೈಕ್ ನಲ್ಲಿ ಬಂದಿದ್ದ ಆರೋಪಿ ಆದಿತ್ಯ ಆಕೆಯನ್ನು ಎಳೆದಾಡಿದ್ದಾನೆ. ಬೈಕ್ ನಲ್ಲಿ ಕುಳಿತುಕೊಳ್ಳುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ವಂಶಿಕಾ ಒಪ್ಪದಿದ್ದಾಗ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಆರೋಪಿ ಆದಿತ್ಯನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ವೇಳೆ ತಾನೇ ಆಕೆಯನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಒಂದು ತಿಂಗಳ ಹಿಂದೆ ವಂಶಿಕಾ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಒಂದು ಫೋಟೋ ಹಾಗೂ ಅದಕ್ಕೆ ತಾನು ಹಾಕಿದ್ದ ಒಂದು ಕಮೆಂಟ್ ವಿಚಾರದಿಂದಲೇ ಇಬ್ಬರ ನಡುವೆ ಗಲಾಟೆ ಆರಂಭವಾಗಿತ್ತು. ಇದೇ ವಿಚಾರವಾಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಗಿ ಡೆಹ್ರಾಡೂನ್ ಎಸ್ ಎಸ್ ಪಿ ಮಾಹಿತಿ ನೀಡಿದ್ದಾರೆ.
10ನೇ ದಿನಕ್ಕೆ ಕಾಲಿಟ್ಟ ಯುದ್ಧ; ಹೊರನಡೆದ ಪ್ರಮುಖ ವಾಹಿನಿಗಳು; 9000 ರಷ್ಯನ್ ಸೈನಿಕರ ಸಾವು ಎಂದ ಉಕ್ರೇನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button