Latest
*ಕಾಲೇಜಿನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಪ್ರೊಫೇಸರ್*
ಪ್ರಗತಿವಾಹಿನಿ ಸುದ್ದಿ: ಕಾಲೇಜಿನಲ್ಲಿಯೇ ಮಾತ್ರೆಸೇವಿಸಿ ಪ್ರೊಫೇಸರ್ ಓರ್ವರು ಆತ್ಮಹಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಎಸ್.ಎಸ್.ಎಂ.ಆರ್.ವಿ ಕಾಲೇಜಿನಲ್ಲಿ ನಡೆದಿದೆ.
ಪ್ರೊಫೇಸರ್ ಶಬಾನಾ ಆತ್ಮಹತ್ಯೆಗೆ ಯತ್ನಿಸಿದವರು. ಪ್ರಾಂಶುಪಾಲರ ಚೇಂಬರ್ ಗೆ ಹೋಗಿ ಮಾತನಾಡಿ ಬಂದವ ಶಬಾನಾ ಏಕಾಏಕಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥರಾಗಿರುವ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಂಶುಪಾಲರ ನಿರಂತರ ಕಿರುಕುಳ, ಅವಮಾನಕ್ಕೆ ಬೇಸತ್ತು ಪ್ರೊ.ಶಬಾನಾ ಕಾಲೇಜಿನಲ್ಲಿಯೇ ಆತಮಹತ್ಯೆಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ತಿಲಕನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




