Film & EntertainmentLatest

*ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ನಿಧನ*

ಪ್ರಗತಿವಾಹಿನಿ ಸುದ್ದಿ: ಕಾಮಿಡಿ ಕಿಲಾಡಿಗಳು ಸೀಸನ್ 3ರಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಮನರಂಜನೆ ನೀಡುತ್ತಿದ್ದ ಜನಪ್ರಿಯ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾಕೇಶ್ ಪೂಜಾರಿ ಅವರು ಉಡುಪಿ ನಿವಾಸಿಯಾಗಿದ್ದರು. ನಿನ್ನೆ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ನಿಧನರಾಗಿದ್ದಾರೆ. ಈ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Home add -Advt

ಮೂಲತಃ ರಂಗಕಲಾವಿದರಾಗಿದ್ದ ರಾಕೇಶ್ ಪೂಜಾರಿ, ಕಾಮಿಡಿ ಕಿಲಾಡಿಗಳು ಕಿರುತೆರೆ ಕಾರ್ಯಕ್ರಮದಿಂದ ಪ್ರಸಿದ್ದರಾಗಿದ್ದರು. ತುಳು ನಾಟಕದ ಮೂಲಕ ಕಲಾವಿದರಾಗಿ ಪಾದಾರ್ಪಣೆ ಮಾಡಿದ್ದ ರಾಕೇಶ್ ತಮ್ಮ ಆಂಗಿಕ ಅಭಿನಯ, ಸರಳ ವ್ಯಕ್ತಿತ್ವದಿಂದ ಜನರ ಮನಗೆದ್ದಿದ್ದರು.

ನಟಿ ರಕ್ಷಿತಾ ಪ್ರೇಮ್ ಸೇರಿದಂತೆ ಹಲವು ಮಂದಿ ನಟ-ನಟಿಯರು ರಾಕೇಶ್ ಪೂಜಾರಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

Related Articles

Back to top button